Ad Widget .

ಅಥಣಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಮಹೇಶ ಕುಮಟಳ್ಳಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಟ್ಟಲಗಿ,ಕನ್ನಾಳ ಬನ್ನೂರ,ಮುರಗುಂಡಿ,ಭರಮಖೋಡಿ ಗ್ರಾಮದಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮನೆ ಮನೆಗೆ ಬಿಜೆಪಿ ಪಕ್ಷದ ಸ್ಟಿಕರ್ ಅಂಟಿಸುವ ಮೂಲಕ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.

Ad Widget . Ad Widget .

ಪ್ರತಿಯೊಬ್ಬ” 8000090009″ಕರೆ ಮಾಡಿ ಬಿಜೆಪಿ ಸದಸ್ಯತ್ವ ಪಡೆಯುವಂತೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ಮತಕ್ಷೇತ್ರದ ಜನರಿಗೆ ಮನವಿ ಮಾಡಿದರು

Ad Widget . Ad Widget .

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿದ್ದೇನೆ. ಬಿಜೆಪಿ ಪಕ್ಷವನ್ನು ಬೆಳೆಸುವ ಸಲುವಾಗಿ ಪ್ರತಿಯೊಬ್ಬರು ಬಿಜೆಪಿ ಪಕ್ಷದ ಸದಸ್ಯತ್ವವನ್ನು ಪಡೆಯಿರಿ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳು ನೇರವಾಗಿ ನಿಮಗೆ ಕರೆ ಮೂಲಕ ಗೊತ್ತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶ್ರೀಮಂತ ಸಲಗರ,ಸಂತೋಷ ಕಕಮರಿ,ಶೇಖರ ಒಳಸಂಗ, ಚಂದ್ರಶೇಖರ ಒಳಸಂಗ, ಯಂಕಪ್ಪ ಅಸ್ಕಿ,ಜ್ಯೋತಿಬಾ ಚವ್ಹಾಣ, ಗುರು ಆಜೂರ ಸೇರಿದಂತೆ ಸಿ ರಾಜಮನಿ,ಗಿರೀಶ್ ಸಜ್ಜನ್ ಇನ್ನು ಅನೇಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *