Ad Widget .

ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಫೈನಲ್| ಬಿಜೆಪಿಯಿಂದ ಶೋಭಾ, ಕಾಂಗ್ರೆಸ್ ‌ನಿಂದ ಅಶೋಕ್ ರೈ ಕಣಕ್ಕೆ!?

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಸಭಾ ಚುನಾವಣೆ‌ ದಿನಗಣನೆಯಾಗ್ತಿದ್ದು, ಹಲವೆಡೆ ಟಿಕೆಟ್ ಗಾಗಿ ಫೈಟ್ ಜೋರಾಗಿದೆ. ಈ ನಡುವೆ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ವಿವಿಧ ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ.

Ad Widget . Ad Widget .

ದ.ಕ ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಗಳನ್ನೇ ಪ್ರಮುಖ ರಾಜಕೀಯ ಪಕ್ಷಗಳು ಕಣಕ್ಕಿಳಿಸಲು ನಿರ್ಧರಿಸಿವೆ. ಪುತ್ತೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದ್ದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಲಗ್ಗೆ ಇಟ್ಟ ಅಶೋಕ್ ಕುಮಾರ್ ಕೋಡಿಂಬಾಡಿ ರವರಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಆರ್.ಎಸ್.ಎಸ್ ತಂಡದಲ್ಲಿ ಪಳಗಿದ ಅಶೋಕ್ ಕುಮಾರ್ ರವರಿಗೆ ತನ್ನದೇ ಆದ ಅಪಾರ ಅಭಿಮಾನಿ ಬಳಗವಿದ್ದು ಪುತ್ತೂರಿನಲ್ಲಿ ಐತಿಹಾಸಿಕ ಗೆಲುವು ತಮ್ಮದಾಗಬಹುದು ಎಂಬ ಕನಸನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.

Ad Widget . Ad Widget .

ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಅಶೋಕ್ ಕುಮಾರ್ ರವರಿಗೆ ತೀವ್ರ ಪೈಪೋಟಿ ನೀಡಲು ಬಿಜೆಪಿ ಮಹತ್ವದ ಹೆಜ್ಜೆ ಹಾಕಿದ್ದು ಅಶೋಕ್ ಕುಮಾರ್ ರವರಿಗೆ ಎದುರಾಳಿಯಾಗಿ ಪ್ರಬಲ ಅಭ್ಯರ್ಥಿಯನ್ನೇ ಬಿಜೆಪಿ ಪುತ್ತೂರಿನಲ್ಲಿ ಕಣಕ್ಕಿಳಿಸುತ್ತಿದೆ. ಬಲ್ಲ ಮೂಲಗಳ ಪ್ರಕಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ‌ಸಂಸದೆ ಶೋಭಾ ಕರಂದ್ಲಾಜೆ ರವರನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ದೃಢವಾಗಿದೆ.

ಶೋಭಾ ಕರಂದ್ಲಾಜೆ ಪುತ್ತೂರಿನಲ್ಲಿ ಚುನಾವಣೆಗೆ ನಿಂತರೆ ಇಲ್ಲಿ ಕಾಂಗ್ರೇಸ್ ಗೆ ಗೆಲುವು ಕಬ್ಬಿಣದ ಕಡಲೆಯಾಗಲಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಚುಕ್ಕಾಣಿ ಹಿಡಿಯಲಿದ್ದು ಮುಂದಿನ ಮುಖ್ಯಮಂತ್ರಿಯಾಗಿ ಶೋಭಾ ಕರಂದ್ಲಾಜೆ ಅವರನ್ನೇ ನೇಮಕ ಮಾಡಲು ಹೈಕಮಾಂಡಿಗೆ ಈಗಾಗಲೇ ಬಲಿಷ್ಟ ಬಿಜೆಪಿ ನಾಯಕರೊಬ್ಬರು ಸೂಚಿಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಇದೇ ಕಾರಣಕ್ಕೆ ಬಿಜೆಪಿಯಿಂದ ಪುತ್ತೂರಿನಲ್ಲಿ ಈ ಭಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗುವ ಬಗ್ಗೆ ಈಗಾಗಲೇ ಆಲೋಚನೆ ನಡೆಸಿರುವುದರ ಬಗ್ಗೆ ವರದಿಯಾಗಿದೆ. ಆದರೆ ರಾಜ್ಯ ರಾಜಕೀಯಕ್ಕೆ ಮತ್ತೆ ಮರಳಲಾರೆ ಎಂದು ಈ ಹಿಂದೆ ಶೋಭಾ ಕರಂದ್ಲಾಜೆ ಹೇಳಿರುವ ಮಾತನ್ನು ಅವರು ಮುರಿದರಷ್ಟೇ ಈ ಎಲ್ಲಾ ಲೆಕ್ಕಾಚಾರ ನಡೆಯಬಹುದು. ಅಷ್ಟಕ್ಕೂ ಪುತ್ತೂರಿನ ಮತದಾರ ಯಾರ ಕೈ ಹಿಡಿಯುತ್ತಾನೋ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *