Ad Widget .

ಯುವತಿಗೆ ಮೆಸೇಜ್ ಮಾಡಿದನೆಂದು ಆತ‌ನ ಕೊಲೆಗೈದರು| ಶವ ತಂದು ಚಾರ್ಮಾಡಿ ಘಾಟ್ ನಲ್ಲಿ ಎಸೆದ ಸಂಬಂಧಿಗಳು| ಪ್ರಕರಣ ಭೇಧಿಸಿದ ಬೆಂಗಳೂರು ಪೊಲೀಸರು

ಸಮಗ್ರ ನ್ಯೂಸ್: ಯುವತಿಗೆ ಮೇಸೇಜ್ ಮಾಡಿದ ಕಾರಣಕ್ಕೆ ಯುವತಿಯ ಸಂಬಂಧಿಗಳು ಯುವಕನನ್ನು ಕೊಲೆ ಮಾಡಿ ಶವವನ್ನು ಚಾರ್ಮಾಡಿ ಘಾಟ್‍ನ ಪ್ರಪಾತಕ್ಕೆ ಎಸೆದು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಪೊಲೀಸರು ಮೃತ ಯುವಕನ ಶವವನ್ನು ಮೇಲೆತ್ತುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಮೃತ ಯುವಕನನ್ನು ಬೆಂಗಳೂರಿನ ಮತ್ತಿಕೆರೆ ನಿವಾಸಿ ಗೋವಿಂದರಾಜು ಎಂದು ಗುರುತಿಸಲಾಗಿದೆ. ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದ ಕಾರಣಕ್ಕೆ, ಯುವತಿ ಸಂಬಂಧಿಕರಾದ ಅನಿಲ್‌ ಕುಮಾರ್‌, ಭರತ್ ಹಾಗೂ ಸ್ನೇಹಿತರು ಸೇರಿ ಹತ್ಯೆ ಮಾಡಿದಲ್ಲದೇ ಯುವಕನ ಶವವನ್ನು ಚಾರ್ಮಾಡಿ ಘಾಟ್‍ಗೆ ತಂದು ಎಸೆದಿದ್ದರು ಎಂದು ತಿಳಿದು ಬಂದಿದೆ.

Ad Widget . Ad Widget .

ಬೆಂಗಳೂರಿನ ಮತ್ತಿಕೆರೆ ನಿವಾಸಿಯಾದ ಗೋವಿಂದರಾಜು ತನ್ನ ಸಂಬಂಧಿಯೇ ಆದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಹೆತ್ತವರ ವಿರೋಧ ಇತ್ತು. ಇತ್ತೀಚೆಗೆ ಯುವಕ ಗೋವಿಂದರಾಜು ಯುವತಿಯ ಮೊಬೈಲ್‌ಗೆ ಸಂದೇಶವನ್ನು ಕಳುಹಿಸಿದ್ದು, ಇದರಿಂದ ಕೋಪಗೊಂಡ ಯುವತಿ ಸಂಬಂಧಿಗಳಾದ ಅನಿಲ್‌ ಕುಮಾರ್‌, ಭರತ್ ಹಾಗೂ ಅವರ ಇಬ್ಬರು ಸ್ನೇಹಿತರು ಯುವಕನನ್ನು ಮತ್ತಿಕೆರೆಯಲ್ಲಿ ಕಾರಿನಲ್ಲಿ ಅಪಹರಣ ಮಾಡಿ ಬೆಂಗಳೂರಿನ ರಾಜಗೋಪಾಲ ನಗರದ ಅಂಧರಹಳ್ಳಿ ಎಂಬಲ್ಲಿ ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ಬಳಿಕ ಯುವಕನ ಮೃತದೇಹವನ್ನು ಅದೇ ಕಾರಿನಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಚಾರ್ಮಾಡಿ ಘಾಟ್‍ಗೆ ತಂದು ಪ್ರಪಾತಕ್ಕೆ ಎಸೆದು ಹೋಗಿದ್ದರು ಎನ್ನಲಾಗಿದೆ.

ಅತ್ತ ಮತ್ತಿಕೆರೆಯಲ್ಲಿ ಯುವಕನ ಪೋಷಕರು ಗೋವಿಂದರಾಜು ನಾಪತ್ತೆಯಾಗಿರುವ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವೇಳೆ ಅವರು ಯುವತಿ ಸಂಬಂಧಿ ಅನಿಲ್‌ ಕುಮಾರ್‌ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. ಪರಿಣಾಮ ಪೊಲೀಸರು ಅನಿಲ್‌ ಕುಮಾರ್‌ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಅನಿಲ್‌ ಕುಮಾರ್‌, ಭರತ್ ಸೇರಿದಂತೆ ಮತ್ತಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಬುಧವಾರ ಬೆಳಗ್ಗೆ ಚಾರ್ಮಾಡಿ ಘಾಟ್‍ಗೆ ಕರೆತಂದಿದ್ದಾರೆ. ಶವ ಎಸೆದ ಸ್ಥಳದಲ್ಲಿ ಪೊಲೀಸರು ಸ್ಥಳೀಯ ಸಮಾಜ ಸೇವಕರಾದ ಸ್ನೇಕ್ ಆರೀಫ್, ಫಿಶ್‍ಮೋಣು ಅವರ ಸಹಾಯ ಪಡೆದು ಶೋಧ ನಡೆಸಿದಾಗ ಪ್ರಪಾತದಲ್ಲಿ ಯುವಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಸಕ್ರೀಯಾ ಸೇವಾ ಸಂಸ್ಥೆಯ ಅಧ್ಯಕ್ಷ ಫಿಶ್ ಮೋಣು, ಸದಸ್ಯರಾದ ಅಬ್ದುಲ್ ರೆಹಮಾನ್ ಆರೀಫ್, ಬಣಕಲ್ ಅಸೇನಾರ್ ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಂಡದ ಸದಸ್ಯರ ಶೋಧ ನಡೆಸಿ ಶವವನ್ನು ಮೇಲೆತ್ತಿದ್ದಾರೆ.

Leave a Comment

Your email address will not be published. Required fields are marked *