Ad Widget .

ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ| ಪತಿ‌ ಹಾಗೂ ಗರ್ಭಿಣಿ ಪತ್ನಿ ಸಜೀವ ದಹನ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ತುಂಬು ಗರ್ಭಿಣಿ ಮತ್ತು ಆಕೆಯ ಪತಿ ಸುಟ್ಟು ಕರಕಲಾದ ಘಟನೆ ಕೇರಳದ ಕಣ್ಣೂರು ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ.

Ad Widget . Ad Widget .

ಮೃತರನ್ನು ರೀಷಾ (24) ಮತ್ತು ಆಕೆಯ ಪತಿ ಪ್ರಜಿತ್ (35) ಎಂದು ಗುರುತಿಸಲಾಗಿದೆ. ಹೆರಿಗೆ ನೋವಿನಿಂದಾಗಿ ಆಸ್ಪತ್ರೆಗೆ ಹೋಗುವಾಗ ಆಸ್ಪತ್ರೆ ತಲುಪುವ ಸುಮಾರು 100 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

Ad Widget . Ad Widget .

ಮಹಿಳೆ, ಆಕೆಯ ಪತಿ ಮತ್ತು ಮೂವರು ಸಂಬಂಧಿಕರು ಕಾರಿನಲ್ಲಿದ್ದರು. ಗಂಡ ಮತ್ತು ಹೆಂಡತಿ ವಾಹನದ ಮುಂಭಾಗದ ಸೀಟಿನಲ್ಲಿ ಕುಳಿತಿದ್ದು, ಸಂಬಂಧಿಕರು ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

ಕೂಡಲೇ ಕಾರಿನ ಹಿಂದಿನ ಸೀಟಿನಲ್ಲಿದ್ದವರನ್ನು ರಕ್ಷಿಸಲಾಗಿದೆ. ಆದರೆ ಬೆಂಕಿ ಹರಡುತ್ತಿದ್ದಂತೆ, ಕಾರಿನ ಮುಂಭಾಗದ ಬಾಗಿಲುಗಳು ಲಾಕ್ ಆಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ತಲುಪಿ ಗರ್ಭಿಣಿ ಮತ್ತು ಆಕೆಯ ಪತಿಯನ್ನು ಹೊರತೆಗೆಯುವ ಹೊತ್ತಿಗೆ, ಅವರು ಸಾವನ್ನಪ್ಪಿದ್ದರು.

Leave a Comment

Your email address will not be published. Required fields are marked *