Ad Widget .

ಸುಳ್ಯ: 10.5 ಕೋಟಿ ರೂ. ವೆಚ್ಚದ ಕಳಪೆ ಕಾಮಗಾರಿ| ಅಧಿಕಾರಿಗಳ ಚಳಿ ಬಿಡಿಸಿದ ಕೋಲ್ಚಾರ್ ಗ್ರಾಮಸ್ಥರು

ಸಮಗ್ರ ನ್ಯೂಸ್:‌‌ 10.5 ಕೋಟಿ ಮೊತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸುಳ್ಯ ತಾಲೂಕಿನ ಕೊಲ್ಚಾರ್ ನಲ್ಲಿ ನಡೆದಿದೆ.

Ad Widget . Ad Widget .

ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ 4 ವರ್ಷದ ಹಿಂದೆ ಕೊಲ್ಚಾರ್ – ಕನ್ನಡಿ ತೋಡು – ಬಂದಡ್ಕ ಅಂತರಾಜ್ಯ ಸಂಪರ್ಕ‌ ರಸ್ತೆಯ ಕಲ್ಲೆಂಬಿ ಯಿಂದ ಕರ್ನಾಟಕ ಗಡಿ ಕನ್ನಡಿತೋಡು ತನಕ ಸುಮಾರು 10.5 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಆಗಿದೆ.

Ad Widget . Ad Widget .

ಕಾಮಗಾರಿ ಕಳಪೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪರಮೇಶ್ವರ್ ಹಾಗೂ ಗುತ್ತಿಗೆದಾರ ಪೃಥ್ವಿ ಸುವರ್ಣರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಗ್ರಾಮಸ್ಥರ ಜೊತೆ ಮಾತನಾಡಿದ ಇಂಜಿನಿಯರ್ ಪರಮೇಶ್ವರ್ ಕಾಮಗಾರಿ ಕಳಪೆಯಾಗಿದ್ದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿಗಳು ಭರ್ಜರಿಯಾಗಿ ಸಾಗುತ್ತಿದ್ದು, ಹಲವೆಡೆ ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಕಳಪೆ ಕಾಮಗಾರಿ ವಿರುದ್ದ ಗ್ರಾಮಸ್ಥರ ಆಕ್ರೋಶ:

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಪಂಚಾಯತ್ ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ನ್ಯಾಯವಾದಿ ಸತೀಶ್ ಕುಂಭಕ್ಕೋಡು,ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಜಗದೀಶ್ ಕೂಳಿಯಡ್ಕ,ಪ್ರಣೀತ್ ಕಣಕ್ಕೂರು, ಯಶಸ್ ಕೊಯಿಂಗಾಜೆ, ಪ್ರದೀಪ್ ಕೊಲ್ಲರಮೂಲೆ, ನೀಲಕಂಠ ಕೊಲ್ಲರಮೂಲೆ, ಚಿದಾನಂದ ಕೋಲ್ಚಾರು, ವಿನೋದ್ ಕೊಯಿಂಗಾಜೆ, ಮಣಿಕಂಠ ಹಾಸ್ಪಾರೆ, ಕಮಲಾಕ್ಷ ಕೊಯಿಂಗಾಜೆ, ಸಜೇಶ್ ಕೊಯಿಂಗಾಜೆ, ಲಕ್ಷ್ಮಣ ಕಣಕ್ಕೂರು, ಬಾಲಕೃಷ್ಣ ಕಣಕ್ಕೂರು, ಹರೀಶ್ ಕೋಲ್ಚಾರು, ಜಯರಾಜ್ ಕಣಕ್ಕೂರು, ಹೇಮಾವತಿ ಕುಡೆಂಬಿ, ಪುರುಷೋತ್ತಮ ಕುಂಭಕ್ಕೋಡು, ಮತ್ತಿತರರು ಭಾಗವಹಿಸಿದರು.

Leave a Comment

Your email address will not be published. Required fields are marked *