Ad Widget .

ಪ್ರಚೋದನಕಾರಿ ಹೇಳಿಕೆ; ಶರಣ್ ಪಂಪ್ ವೆಲ್ ವಿರುದ್ದ ಎಫ್ಐಆರ್

ಸಮಗ್ರ ನ್ಯೂಸ್: ಭಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಹೆಚ್‌ಪಿ ಪ್ರಾಂತ್ಯ ಸರ ಸಂಚಾಲಕ ಶರಣ್ ಪಂಪ್‌ವೆಲ್ ವಿರುದ್ಧ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.‌

Ad Widget . Ad Widget .

ತುಮಕೂರು ನಗರದ ಬಾರ್ ಲೈನ್ ರೋಡ್ ನಿವಾಸಿ ಸೈಯದ್ ಬುರ್ಹಾನ್ ಉದ್ದೀನ್ ಎಂಬುವರು ಶರಣ್ ಪಂಪ್‌ವೆಲ್ ವಿರುದ್ಧ ತಿಲಕ್ ಪಾರ್ಕ್ ಹಾಗೂ ಎಸ್ಪಿಗೆ ದೂರು ನೀಡಿದ್ದರು, ಈ ದೂರು ಆಧರಿಸಿ ತಿಲಕ್ ಪಾರ್ಕ್ ಪೊಲೀಸರು ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Ad Widget . Ad Widget .

ಕಳೆದ 28ನೇ ತಾರೀಕಿನಂದು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಶರಣ್ ಪಂಪ್‌ವೆಲ್ ಹಿಂದೂಗಳನ್ನು ಶಕ್ತಿ ಹೀನರು ಎಂದು ಕರೆಯುವ ಸಮಾಜ ಎಚ್ಚರಿಕೆಯಿಂದ ಇರಬೇಕು, ಗುಜರಾತ್ ನಲ್ಲಿ ನಡೆದ ನರಮೇಧಲ್ಲಿ 2000 ಸಾವಿರ ಜನರನ್ನು ಹಿಂದೂಗಳು ಕೊಂದಿದ್ದಾರೆ. ಇದು ಹಿಂದೂಗಳ ಶಕ್ತಿ ಹಾಗೂ ತುಮಕೂರು ಜಿಲ್ಲೆಯನ್ನೂ ಕೂಡ ಹಿಂದುತ್ವದ ಫ್ಯಾಕ್ಟರಿ ಮಾಡುತ್ತೇವೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು,

Leave a Comment

Your email address will not be published. Required fields are marked *