Ad Widget .

ಗರ್ಲ್ ಪ್ರೆಂಡ್ ನ 3 ವರ್ಷದ ಮಗಳನ್ನು ಅತ್ಯಾಚಾರ ಎಸಗಿ ಕೊಂದ ಯುವಕ| ಬೆಂಗಳೂರಿನಲ್ಲೊಂದು ಭಯಾನಕ ಘಟನೆ

ಸಮಗ್ರ ನ್ಯೂಸ್: ಮದುವೆಯಾಗಿ, ಮಗು ಇರುವ ಮಹಿಳೆಯ ಜೊತೆ ಸಂಬಂಧ ಹೊಂದಿದ್ದ ಬೆಂಗಳೂರಿನ 26 ವರ್ಷದ ಯುವಕನೊಬ್ಬ ತನ್ನ ಗರ್ಲ್​ಫ್ರೆಂಡ್​​ನ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ಜ.31ರಂದು ನಡೆದಿದೆ.

Ad Widget . Ad Widget .

ಒಂಟಿಯಾಗಿ ಮಗಳೊಂದಿಗೆ ವಾಸವಾಗಿದ್ದ ಮಹಿಳೆ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಆರೋಪಿಯೊಂದಿಗೆ 1 ವರ್ಷದಿಂದ ಸಂಬಂಧ ಹೊಂದಿದ್ದು, ಆಕೆಯನ್ನು ಭೇಟಿಯಾಗಲು ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಆಕೆಯ 3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾಗಿ ತಿಳಿದುಬಂದಿದೆ. ಅಲ್ಲದೇ ಈ ವಿಚಾರವನ್ನು ಆಕೆ ಬೇರೆಯವರಿಗೆ ಹೇಳಿದರೆ ಕಷ್ಟವೆಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

Ad Widget . Ad Widget .

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಮಹಿಳೆ ಮನೆಯಲ್ಲಿ ಇಲ್ಲದ ವೇಳೆ, ಮಗು ಒಂದೇ ಮನೆಯಲ್ಲಿದ್ದಾಗ ಆರೋಪಿ ಆ ಮನೆಗೆ ಹೋಗಿದ್ದಾನೆ. ಆಗ ಆ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಮತ್ತು ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಲ್ಲೇ ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ತಾಯಿ ತನ್ನ ಮಗಳು ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿ ಗಾಬರಿಯಾಗಿ ತನ್ನ ಬಾಯ್​ಫ್ರೆಂಡ್​ಗೆ ಫೋನ್ ಮಾಡಿದ್ದಾಳೆ. ತನಗೇನೂ ಗೊತ್ತೇ ಇಲ್ಲವೆನ್ನುವಂತೆ ಅಲ್ಲಿಗೆ ಬಂದ ಆರೋಪಿಯೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Leave a Comment

Your email address will not be published. Required fields are marked *