ಪುತ್ತೂರು: ಕಂಬಳದಲ್ಲಿ ಹುಡುಗಿಯರ ಪೋಟೋ ತೆಗೆಯುತ್ತಿದ್ದಾತ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪುತ್ತೂರಿನ ಕೋಟಿ ಚೆನ್ನಯ ಕಂಬಳ ಗದ್ದೆ ಪರಿಸರದಲ್ಲಿ ಯುವಕನೋರ್ವ ಯುವತಿಯ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೊಪ್ಪಿಸಿದ ಮತ್ತು ವಿಚಾರಣೆ ವೇಳೆ ಆತನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಪೊಟೋ ಇರುವುದು ಬೆಳಕಿಗೆ ಬಂದಿದೆ.

Ad Widget ... ..

ಕುರಿಯ ಮೂಲದ ಯುವಕ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು ಈತ ಕಂಬಳದ ಪರಿಸರದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ. ಈ ಸಂದರ್ಭ ಓರ್ವ ಯುವತಿ ಇದನ್ನು ಗಮನಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಳು. ಕಾರ್ಯಕರ್ತರು ಯುವಕನನ್ನು ಠಾಣೆಗೆ ಕರೆದೊಯ್ದಿದ್ದು, ಯುವಕನ ಮೊಬೈಲ್‌ ಪರಿಶೀಲನೆ ನಡೆಸಿದಾಗ ಇನ್ನು ಹಲವು ಯುವತಿಯರ ಫೋಟೋಗಳು ಇರುವುದು ಬೆಳಕಿಗೆ ಬಂದಿದೆ.

Ad Widget

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *