Ad Widget .

ಸುಳ್ಯ: ಉರೂಸ್ ಮುಗಿದರೂ ವಿವೇಚನಾ ರಜೆ ಮುಂದುವರಿಕೆ| ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂ

ಸಮಗ್ರ ನ್ಯೂಸ್: ಉರೂಸ್ ಕಾರ್ಯಕ್ರಮ ಮುಗಿದರೂ ಶಾಲಾ ವಿವೇಚನಾ ರಜೆಯನ್ನು ಮುಂದುವರಿಸಿರುವ ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ಅಜ್ಜಾವರ ಮಾಪಳಡ್ಕ ದರ್ಗಾದಲ್ಲಿ ವರ್ಷಂಪ್ರತಿಯಂತೆ ಈ ಭಾರಿಯು ಅದ್ದೂರಿಯಾಗಿ ಉರುಸ್ ಕಾರ್ಯಕ್ರಮ ಜರಗಿತು. ಉರುಸ್ ಕಾರ್ಯಕ್ರಮ ಮುಗಿದ ಬಳಿಕ ಇತ್ತ ಸರಕಾರಿ ಶಾಲೆಗೆ ಇಂದು ಕೂಡಾ ವಿವೇಚನಾ ರಜೆ ಘೋಷಣೆ ಮಾಡಿರುವುದು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗಿದೆ .

Ad Widget . Ad Widget .

ಇತಿಹಾಸ ಪ್ರಸಿದ್ದ ಮಾಪಳಡ್ಕ ಮುಖಾಂ ಊರುಸ್ ಕಾರ್ಯಕ್ರಮವು ಮುಗಿದಿದ್ದರೂ ಕೇವಲ ಮಾವಿನಪಳ್ಳದ ಕೆಲ ವಿದ್ಯಾರ್ಥಿಗಳಿಗಾಗಿ ಶಾಲೆಗೆ ಮುಂದುವರೆಸಿದ್ದಾಗಿ ಹೇಳಲಾಗಿದ್ದು, ಚರ್ಚೆಯ ವಿಷಯವಾಗಿದೆ.

ಅಜ್ಜಾವರ ಗ್ರಾಮದ ಅಡ್ಪಂಗಾಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ತಮ್ಮ ವಿವೇಚನಾ ರಜೆಯ ಅಧಿಕಾರವನ್ನು ಬಳಸಿ ನೀಡಬಹುದಾದ ನಾಲ್ಕು ರಜೆಯನ್ನು ಎಡ್ ಡಿ ಎಂ ಸಿ ಅಧ್ಯಕ್ಷರಾದ ಅಶ್ರಫ್ ಸಹದಿರವರು ಅಜ್ಜಾವರ ಗ್ರಾಮದ ಇತಿಹಾಸ ಪ್ರಸಿದ್ದ ಮೇನಾಲ ದರ್ಗಾದ ಊರುಸ್ ಕಾರ್ಯಕ್ರಮಕ್ಕೆ ನೀಡದೇ ಪಕ್ಕದ ಜಾಲ್ಸೂರು ಗ್ರಾಮದ ದರ್ಗಾದ ಊರುಸ್ ಕಾರ್ಯಕ್ರಮಕ್ಕೆ ಎರಡು ದಿನಗಳ ಕಾಲ ಶಾಲೆಗೆ ರಜೆಯನ್ನು ಘೋಷಣೆ ಮಾಡಿಸಿದ್ದು ಇದು ಅಧ್ಯಕ್ಷ ಪದವಿಯ ದುರುಪಯೋಗ ಎಂದು ಸಾರ್ವಜನಿಕ ವಲಯದಲ್ಲಿ ದೂರಲಾಗುತ್ತಿದೆ. ಇತ್ತ ಪೋಷಕರು ನಮ್ಮ ಗ್ರಾಮದ ಇತಿಹಾಸ ಪ್ರಸಿದ್ದ ಮೇನಾಲ ದರ್ಗಾದ ಊರುಸ್ ಸಂದರ್ಭದಲ್ಲಿ ನೀಡುವುದನ್ನು ಬಿಟ್ಟು ಇನ್ನೊಂದು ಗ್ರಾಮದಲ್ಲಿನ ಊರುಸ್ ಕಾರ್ಯಕ್ರಮಕ್ಕೆ ನೀಡಿರುವುದು ಸರಿಯಲ್ಲ ಎಂದು ದೂರುತ್ತಿದ್ದಾರೆ .

ವಿವೇಚನಾ ರಜೆಯನ್ನು SDMC ಸಮಿತಿಯಲ್ಲಿಯೇ ಚರ್ಚಿಸಿ ಮಾಡಿದ್ದರು ಸ್ವತಃ SDMC ಅಧ್ಯಕ್ಷರೇ ಮಾಪಳಡ್ಕ ದರ್ಗಾದ ಅಧ್ಯಕ್ಷರು ಕೂಡಾ ಆಗಿದ್ದು ತಾವೇ ಅಧ್ಯಕ್ಷರು ಆಗಿರುವ ದರ್ಗಾದ ಊರುಸ್ ಕಾರ್ಯಕ್ರಮಕ್ಕೆ ತಾವು SDMC ಅಧ್ಯಕ್ಷರು ಆಗಿರುವ ಸರಕಾರಿ ಶಾಲೆಗೆ ರಜೆ ಘೋಷಣೆ ಮಾಡಿಸಿರುವುದು ಇದೀಗ ಅಧಿಕಾರ ದುರುಪಯೋಗ ಎಂಬ ಕೂಗು ಕೇಳಿ ಬರುತ್ತಿದೆ.

ಇತ್ತ ಈ ವಿಚಾರವು ಬೆಳಕಿಗೆ ಬರುತ್ತಿದ್ದಂತೆ ಎಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಂತೆ‌ ಸುಳ್ಯದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ ,‌ ಘಟನೆ ಗಮನಕ್ಕೆ ಬಂದಿದ್ದು ಕಾರಣ ಕೇಳಿ ತಕ್ಷಣವೇ ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದಿದ್ದಾರೆ.

ಈ ಕುರಿತು ಮುಖ್ಯ ಶಿಕ್ಷಕಿ ಧನಲಕ್ಷ್ಮಿ ಸ್ಪಷ್ಟನೆ ನೀಡಿದ್ದು, ನಾನು ಒಂಬತ್ತು ದಿನಗಳ ಕಾಲ ರಜೆಯಲ್ಲಿದ್ದು ನಾಳೆ ಶಾಲೆಗೆ ವರದಿ‌ ಮಾಡಿಕೊಳ್ಳಲಿದ್ದೇನೆ, ನಾವು ಈ ರಜೆಯ ವಿಚಾರವನ್ನು ಜೂನ್ ತಿಂಗಳಿನಲ್ಲೇ ದಿನಾಂಕ ತಿಳಿಸದೆ ಶಿಕ್ಷಣ ಇಲಾಖೆಗೆ ಕಳುಹಿಸಿದ್ದು ಮೌಖಿಕವಾಗಿ ಮೊನ್ನೆ ತಿಳಿಸಿದ್ದೆವು ಮತ್ತು ನಮ್ಮ ನಾಲ್ಕು ವಿವೇಚನಾ ರಜೆಯು ಕರ್ಲಪ್ಪಾಡಿ ಜಾತ್ರೆ ಮತ್ತು ಸುಳ್ಯದ ಚೆನ್ನಕೇಶವ ಜಾತ್ರೆಗೆ ತಲಾ ಒಂದರಂತೆ ವಿನಿಯೋಗಿಸಿದ್ದು ಉಳಿದ ಎರಡು ರಜೆಗಳನ್ನು ಮಾಪಳಡ್ಕ ದರ್ಗಾದ ಊರುಸ್ ಕಾರ್ಯಕ್ರಮಕ್ಕೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಈ ಕುರಿತು SDMC ಅಧ್ಯಕ್ಷರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

Leave a Comment

Your email address will not be published. Required fields are marked *