ಟಯರ್ ಬದಲಿಸುವ ವೇಳೆ ಜಾಕ್ ಮುರಿದು ಇಬ್ಬರು ದುರ್ಮರಣ

ಸಮಗ್ರ‌ ನ್ಯೂಸ್: ಟ್ರ್ಯಾಕ್ಟರ್ ಟೈರ್ ಬದಲಿಸುವಾಗ ಜಾಕ್ ಮುರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ.

Ad Widget ... ..

ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಟೈರ್ ಬದಲಾಯಿಸುವಾಗ ಜಾಕ್ ಮುರಿದ ಪರಿಣಾಮ ಟ್ರ್ಯಾಕ್ಟರ್ ನ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Ad Widget

ಮೃತರನ್ನು ಸುಬ್ರಹ್ಮಣ್ಯ (30) ಹಾಗೂ ಸುನೀಲ್ (27) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *