ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ

ಸಮಗ್ರ ನ್ಯೂಸ್: ದೆಹಲಿಯ ಪಶ್ಚಿಮ ವಿಹಾರ್‌ ನಲ್ಲಿ ಸೋಮವಾರ 32 ವರ್ಷದ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ಮೃತರನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಭವಿಸಿದಾಗ ಸಂಜೆ 7:30 ರ ಸುಮಾರಿಗೆ ತನ್ನ ಕಚೇರಿಯಿಂದ ಹಿಂತಿರುಗುತ್ತಿದ್ದರು.

Ad Widget ... ..

ಮಹಿಳೆ ಫ್ಲಿಪ್‌ ಕಾರ್ಟ್‌ ನ ಕೊರಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೃತಳ ಪತಿ ದೀಪಕ್ ಅವರು ತಮ್ಮ ಮನೆಗೆ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಬಂದಿದ್ದು, ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

Ad Widget

ಘಟನೆಯ ನಂತರ ಡಿಸಿಪಿ ಹರೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿದರು. ಆರೋಪಿಗಳ ಗುರುತು ಪತ್ತೆಗೆ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.

Leave a Comment

Your email address will not be published. Required fields are marked *