Ad Widget .

ಭಾರತ ಮತ್ತೆ ಪ್ರಕಾಶಿಸುತ್ತಿದೆ!! ಇಸ್ರೋ ನೀಡಿದೆ ಹೊಸ ವರದಿ

ಸಮಗ್ರ ನ್ಯೂಸ್: ಇತ್ತೀಚೆಗೆ, ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ವರದಿಯಲ್ಲಿ, ಒಂದು ದಶಕದಲ್ಲಿ ಭಾರತದಲ್ಲಿ ರಾತ್ರಿ ಸಮಯದ ದೀಪಗಳಲ್ಲಿ 43% ಹೆಚ್ಚಳವಾಗಿದೆ ಎಂದು ಹೇಳಿದೆ. ಸೌಭಾಗ್ಯ ಯೋಜನೆ, ಉಜ್ವಲಾ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ರಾತ್ರಿಯ ದೀಪಗಳ ಏರಿಕೆಗೆ ಮೂರು ಪ್ರಮುಖ ಕಾರಣಗಳಿವೆ ಎಂದು ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾತ್ರಿ ವೇಳೆ ಭಾರತದ ಭೂಭಾಗವನ್ನು ಸೆರೆಹಿಡಿಯುವ ಇಸ್ರೋದ ಉಪಗ್ರಹಗಳು, ಹಿಂದಿನ ದಶಕಕ್ಕೆ ಹೋಲಿಸಿದರೆ ಇದೀಗ ಭಾರತ ಹೆಚ್ಚು ಪ್ರಕಾಶಮಾನವಾಗಿದೆ ಎಂಬ ಸಿಹಿ ಸುದ್ದಿ ನೀಡಿವೆ. ಹೈದರಾಬಾದ್‌ನ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌(NRSC) 2012-2021 ಅವಧಿಯಲ್ಲಿ ಉಪಗ್ರಹಗಳು ಸೆರೆಹಿಡಿದ ಭಾರತದ ಭೂಭಾಗದ ಫೋಟೋಗಳನ್ನು ಆಧರಿಸಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರನ್ವಯ ಕಳೆದ 9 ವರ್ಷದಲ್ಲಿ ರಾತ್ರಿ ವೇಳೆಯ ಪ್ರಕಾಶಮಾನದಲ್ಲಿ ಶೇ.43ರಷ್ಟು ಭಾರೀ ಏರಿಕೆ ಕಂಡುಬಂದಿದೆ.

Ad Widget . Ad Widget . Ad Widget .

ರಾಜ್ಯವಾರು ಪ್ರಕಾಶಮಾನ ಏರಿಕೆ ಪ್ರಮಾಣ ಗಮನಿಸಿದಾಗ ಕೆಲ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ. ಅವುಗಳೆಂದರೆ ಬಿಹಾರ (ಶೇ.8.36ರಿಂದ ಶೇ.47.97ಕ್ಕೆ), ಉತ್ತರಪ್ರದೇಶ (ಶೇ.26.96ರಿಂದ ಶೇ.43.5ಕ್ಕೆ), ಮಧ್ಯಪ್ರದೇಶ (ಶೇ.8.99ರಿಂದ ಶೆ.14.95ಕ್ಕೆ)ಕ್ಕೆ ಹೆಚ್ಚಳವಾಗಿದೆ. 6 ರಾಜ್ಯಗಳಲ್ಲಿನ ಬದಲಾವಣೆಯ ಗಮನಾರ್ಹವಲ್ಲ ಎಂದು ಪರಿಗಣಿಸಲ್ಪಟ್ಟಿದ್ದರೆ, 21 ರಾಜ್ಯಗಳಲ್ಲಿ ಶೇ.6ರಿಂದ ಶೇ.40ರವರೆಗೂ ಬದಲಾವಣೆ ದಾಖಲಾಗಿದೆ. ಒಟ್ಟಾರೆ ಭಾರತದ ಪ್ರಕಾಶಮಾನತೆ ಸರಾಸರಿ ಶೇ.17.53ರಿಂದ ಶೇ.22.96ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ 2012ರಲ್ಲಿ ಶೇ.25.25ರಷ್ಟಿದ್ದ ಪ್ರಕಾಶಮಾನತೆ ಪ್ರಮಾಣವು 2021ರಲ್ಲಿ ಶೇ.32.99ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳ ಪೈಕಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರಮುಖವಾದ ಬದಲಾವಣೆ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ರಾಜ್ಯಗಳ ಮೂಲ ಅಂಕಿಅಂಶ 2012ರಲ್ಲೇ ಸಾಕಷ್ಟು ಹೆಚ್ಚಿದ್ದ ಕಾರಣ, ಕಳೆದ 10 ವರ್ಷಗಳಲ್ಲಿ ಭಾರೀ ಬೆಳವಣಿಗೆ ಕಂಡುಬಂದಿಲ್ಲ ಎಂದು ವರದಿ ವಿಶ್ಲೇಷಿಸಿದೆ.

ಭಾರತ ಹೆಚ್ಚು ಪ್ರಕಾಶಮಾನವಾಗಲು ಮೋದಿ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. 2017ರಿಂದ ಸೌಭಾಗ್ಯ ಯೋಜನೆಯಡಿ ಜಾರಿಗೆ ತರಲಾದ ಮನೆಮನೆಗೂ ವಿದ್ಯುತ್‌, 50000 ಕಿ.ಮೀನಷ್ಟುಹೆಚ್ಚುವರಿ ಹೆದ್ದಾರಿಗಳ ನಿರ್ಮಾಣ ಅಲ್ಲಿ ಲೈಟ್‌ಗಳನ್ನು ಹಾಕಿರುವುದು, ಅದರಲ್ಲೂ ವಿಶೇಷವಾಗಿ ಉಜಾಲ ಯೋಜನೆಯಡಿ ಎಲ್‌ಇಡಿ ಬಲ್ಬ್‌ಗಳ ಬಳಕೆ, ಟೋಲ್‌ ಪ್ಲಾಜಾಗಳಲ್ಲಿನ ಬೆಳಕು, ತಂಗುದಾಣಗಳು, ಟ್ರಕ್‌ ಬೇ, ಬಸ್‌ ತಂಗುದಾಣ, ಮೇಲುಸೇತುವೆಗಳು, ಅಂಡರ್‌ಪಾಸ್‌ಗಳ ನಿರ್ಮಾಣ ಕೂಡಾ ರಾತ್ರಿ ಹೊತ್ತು ಭಾರತದಲ್ಲಿ ಬೆಳಕು ಹೆಚ್ಚಾಗಿ ಕಾಣಲು ಕಾರಣ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *