Ad Widget .

ಅಥಣಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಠಳ್ಳಿ

ಸಮಗ್ರ ನ್ಯೂಸ್ : ಅಥಣಿ ತಾಲೂಕಿನ‌ ಹುಲಗಬಾಳಿ ಗ್ರಾಮದಲ್ಲಿ‌ ಇದುವರೆಗೆ ಕನಿಷ್ಠ 10 ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೆನೆ, ಬರುವ ದಿನಮಾನದಲ್ಲಿ ಇನ್ನಷ್ಟು ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಹುಲಗಬಾಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವೆ ಎಂದು ಅಥಣಿ ಶಾಸಕ ಹಾಗೂ ಕರ್ನಾಟಕ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.

Ad Widget . Ad Widget .

ಅವರು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಸುಮಾರು 02 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಅಥಣಿ ಕ್ಲಬ್ ನಿಂದ ಹುಲಗಬಾಳಿ ಕೂಡು ರಸ್ತೆಯವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ 05 ಲಕ್ಷ ರೂ ಅನುದಾನದಲ್ಲಿ ಯಲ್ಲಮ್ಮದೇವಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಪ್ರತಿಯೊಂದು ಗ್ರಾಮದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಅವರು ಸೇವೆ ಮಾಡಲು ಕೊಟ್ಟ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತೆನೆ ಎಂದರು.

Ad Widget . Ad Widget .

ಈ ವೇಳೆ ಗುತ್ತಿಗೆದಾರ ಸುನೀಲ ಚವ್ಹಾಣ, ಗ್ರಾಮಸ್ಥರಾದ ಭೀರಪ್ಪ ಶೇಡಬಾಳೆ, ದೊಂಡಿಬಾ ದೈಪೊಡೆ, ಶಿವಾಜಿ ಶಿಂಧೆ, ಪ್ರಕಾಶ ಕಾಂಬಳೆ, ರವಿ ಪಾಟೀಲ, ಶಾಂತಿನಾಥ ತೇರದಾಳ, ಕುಮಾರ ಕಾಂಬಳೆ, ಗೋವಿಂದ ಸೋಲಂಕರ, ಮಾರುತಿ ಹರಾಳೆ, ಅರುಣಗೌಡ ಪಾಟೀಲ, ಬೀರಪ್ಪ ಕಾಂಬಳೆ ಮುಖಂಡರಾದ ನಿಂಗಪ್ಪ ನಂದೇಶ್ವರ ಸೇರಿದಂತೆ ಇತರರು‌ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *