ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಈ ಕಾರು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಕಾರಾಗಿದೆ.
ಚೆನ್ನ ಘಟಕದಲ್ಲಿ BMW X1 ಕಾರು ಉತ್ಪಾದನೆ ಮಾಡಲಾಗಿದೆ. BMW ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ನೂತನ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
BMW X1 sಡ್ರೈವ್ 18iX ಲೈನ್(ಪೆಟ್ರೋಲ್): 45,90,000 ರೂಪಾಯಿ BMW X1 sಡ್ರೈವ್ 18dM ಸ್ಪೋರ್ಟ್ಸ್ (ಡೀಸೆಲ್): 47,90,000 ರೂಪಾಯಿ ಎಂಬಂತೆ ಎಕ್ಸ್ ಶೋರೂಂ ಬೆಲೆ ನಿಗದಿ ಪಡಿಸಲಾಗಿದೆ.
ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.ಈ ಬಿಎಂಡಬ್ಲ್ಯು X1 ಎಸ್‍ಯುವಿಯಲ್ಲಿ 9.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ರೂಪಾಂತರವು 208 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಪೆಟ್ರೋಲ್ ಎಂಜಿನ್ 16.3 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18d M ಸ್ಪೋರ್ಟ್ ರೂಪಾಂತರದಲ್ಲಿ, 2.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಡೀಸೆಲ್ ಎಂಜಿನ್ 20.37k ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕಳೆದ ವರ್ಷ ಜಾಗತಿಕವಾಗಿ ಪರಿಚಯಿಸಲಾದ ಮೂರನೇ ತಲೆಮಾರಿನ ಬಿಎಂಡಬ್ಲ್ಯು X1 ಎಸ್‍ಯುವಿಯು 4,500 mm ಉದ್ದ, 1,845 mm ಅಗಲ ಮತ್ತು 1,642 mm ಎತ್ತರವನ್ನು ಹೊಂದಿದ್ದರೆ, ಇದರ ವ್ಹೀಲ್ ಬೇಸ್ 2,692 mm ಆಗಿದೆ.ಇದು ಅದರ ಹಿಂದಿನ ಮಾದರಿಗಿಂತ 61 mm ಉದ್ದವಾಗಿದೆ, 24 mm ಅಗಲ ಮತ್ತು 30mm ಎತ್ತರವಾಗಿದೆ ಮತ್ತು 22 mm ಹೆಚ್ಚು ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.
ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18d M ಸ್ಪೋರ್ಟ್ ರೂಪಾಂತರವು 8.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ರೂಪಾಂತರವು 210 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.