Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ನೀವು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಕೆಲವು ಹೊಸ ಬಟ್ಟೆಗಳು ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಸೂಕ್ತ ಸಮಯವಾಗಿದ್ದು, ನಿಮ್ಮ ಮಾತು ಜನರನ್ನು ಮೆಚ್ಚಿಸಲಿದೆ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಘನತೆ ವೃದ್ಧಿಸಲಿದೆ. ನಿಮ್ಮ ಬಾಸ್‌ ನಿಮ್ಮನ್ನು ಹೊಗಳಲಿದ್ದಾರೆ. ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ನಿಮ್ಮ ಬಂಧವು ಸುಧಾರಿಸಲಿದೆ. ನಿಮ್ಮ ಮಗ ಅಥವಾ ಮಗಳು ಬದುಕಿನಲ್ಲಿ ಪ್ರಗತಿ ಸಾಧಿಸಲಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ.

Ad Widget . Ad Widget .

ವೃಷಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಅನಗತ್ಯ ಚಿಂತೆಗಳಿಂದ ದೂರವಿರಿ. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ, ಒತ್ತಡವು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿ ವಾತಾವರಣ ಇರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೊರಗೆ ಹೋಗಿ ಚಲನಚಿತ್ರವನ್ನು ವೀಕ್ಷಿಸಲು ಯೋಜನೆ ರೂಪಿಸಬಹುದು. ನಿಮ್ಮ ಕೆಲಸವು ನಿಮ್ಮ ಬಾಸ್‌ನ ಮೆಚ್ಚುಗೆ ಗಳಿಸಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಪ್ರಯತ್ನದ ಫಲವಾಗಿ ಉತ್ತಮ ಲಾಭ ಗಳಿಸಲಿದ್ದಾರೆ. ಪ್ರಣಯ ಪಕ್ಷಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ಕೆಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಈ ವಾರದಲ್ಲಿ ಯಾರಾದರೂ ವಿಶೇಷ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದೀರಿ. ವಿವಾಹಿತರು ವೈವಾಹಿಕ ಬದುಕಿನ ಆನಂದವನ್ನು ಸವಿಯಲಿದ್ದಾರೆ. ನಿಮ್ಮ ಸಂಗಾತಿಯು ನಿಮ್ಮನ್ನು ಹೊಗಳಲಿದ್ದು, ಇದು ನಿಮಗೆ ಸಂತೋಷವನ್ನು ನೀಡಲಿದೆ. ಪ್ರವಾಸಕ್ಕೆ ಹೋಗಲು ಇದು ಸೂಕ್ತ ಕಾಲವಲ್ಲ. ಹೀಗಾಗಿ ಒಂದಷ್ಟು ಜಾಗರೂಕತೆ ವಹಿಸಿ.

Ad Widget . Ad Widget .

ಮಿಥುನ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ನೀವು ನಿಮ್ಮ ಅಧ್ಯಯನಗಳ ಕುರಿತು ಸಾಕಷ್ಟು ಯೋಚನೆ ಮಾಡಲಿದ್ದೀರಿ ಹಾಗೂ ನೀವು ನಿಮ್ಮ ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವು ಪಡೆಯುವುದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದು, ಇದು ನಿಮಗೆ ಸಾಕಷ್ಟು ಸಂತೃಪ್ತಿ ನೀಡಲಿದೆ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ನಿಮ್ಮ ಸುತ್ತಮುತ್ತ ಇರುವ ಯಾವುದೇ ವ್ಯಕ್ತಿಯ ಜೊತೆಗೆ ತಪ್ಪು ಸಂವಹನ ಮಾಡಬೇಡಿ. ಇದು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇದು ವ್ಯಾಪಾರೋದ್ಯಮಗಳಿಗೆ ಸಕಾಲವಾಗಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡವು ಕಡಿಮೆಯಾಗಲಿದೆ ಹಾಗೂ ನೀವು ತೀರ್ಥಯಾತ್ರೆಗೆ ಹೋಗಲು ಯೋಜನೆ ಹೂಡಬಹುದು.

ಕರ್ಕಾಟಕ: ಈ ವಾರದ ಆರಂಭದಲ್ಲಿ ನೀವು ನಿಮ್ಮ ಸಿಹಿ ಮಾತಿನ ಮೂಲಕ ಜನರ ಮೇಲೆ ಪ್ರಭಾವ ಬೀರಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿವೆ. ವೃತ್ತಿಪರ ಪ್ರಯಾಣದ ಮೂಲಕ ನೀವು ಲಾಭ ಗಳಿಸಲಿದ್ದೀರಿ. ಅಮದು-ರಫ್ತು ವ್ಯವಹಾರದಲ್ಲಿ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಸಹೋದ್ಯೋಗಿಗಳ ಸಹಕಾರ ಪಡೆಯಲಿದ್ದೀರಿ. ಯಾವುದೇ ದಾಖಲೆಗೆ ಸಹಿ ಹಾಕುವ ಮೊದಲು ಅದನ್ನು ಎಚ್ಚರಿಕೆಯಿಂದ ಓದಿ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯಗಳನ್ನು ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ಕಲಿತರೆ, ಅವರು ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಿ, ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ ಇದು ಉತ್ತಮ ಮತ್ತು ಲಾಭದಾಯಕ ಹಂತವಾಗಿದೆ. ಆದರೆ ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುವುದು ಅತ್ಯಗತ್ಯ. ನಿಮ್ಮ ಸಂಬಂಧಿಗಳ ಜೊತೆಗೆ ನೀವು ಉತ್ತಮ ಸಂಬಂಧವನ್ನು ಆನಂದಿಸಲಿದ್ದೀರಿ. ಹೊಸ ಪ್ರೇಮ ಸಂಬಂಧಕ್ಕೆ ಕೈ ಹಾಕುವ ಮೊದಲು ಎಚ್ಚರ ವಹಿಸಿ. ಅಲ್ಪ ಪ್ರಮಾಣದ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಆರೋಗ್ಯದಾಯಕ ಆಹಾರವನ್ನು ಮಾತ್ರವೇ ಸೇವಿಸಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.

ಸಿಂಹ: ಇದು ನಿಮ್ಮ ಪಾಲಿಗೆ ಅತ್ಯಂತ ಆರಾಮದಾಯಕ ವಾರ ಎನಿಸಲಿದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ದೂರದ ಪ್ರಯಾಣಕ್ಕೆ ಹೋಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮ ಮತ್ತು ಪ್ರಯತ್ನದ ಮೇಲೆ ನಂಬಿಕೆ ಇಡಬೇಕು. ಏಕೆಂದರೆ ಇದು ಮಾತ್ರವೇ ನಿಮಗೆ ಉತ್ತಮ ಫಲಿತಾಂಶವನ್ನು ನೀಡಬಲ್ಲದು. ನಿಮ್ಮ ಸಹೋದ್ಯೋಗಿಗಳ ಜೊತೆಗಿನ ಉತ್ತಮ ಬಾಂಧವ್ಯವು ನಿಮಗೆ ಲಾಭ ತರಲಿದೆ. ವ್ಯಾಪಾರೋದ್ಯಮಿಗಳು ತಮ್ಮ ವೃತ್ತಿಪರ ಚಟುವಟಿಕೆಗಳಲ್ಲಿ ನಾವಿನ್ಯತೆ ತರಬೇಕು. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಉತ್ತಮ ವೈವಾಹಿತ ಸಂಬಂಧವನ್ನು ಆನಂದಿಸಲಿದ್ದೀರಿ. ನಿಮ್ಮ ಮಗ ಅಥವಾ ಮಗಳು, ನಿಮಗೆ ಸಂತೃಪ್ತಿ ನೀಡುವಂತಹ ಏನಾದರೂ ಒಂದು ಕೆಲಸವನ್ನು ಮಾಡಲಿದ್ದಾರೆ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ನಿಮ್ಮ ಪ್ರಣಯ ಸಂಗಾತಿಯನ್ನು ನಿಮ್ಮ ಜೀವನ ಸಂಗಾತಿಯಾಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾಗಲಿದ್ದೀರಿ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಪ್ರವಾಸಕ್ಕೆ ಹೋಗಲು ಉತ್ತಮ ವಾರ ಎನಿಸಲಿದೆ.

ಕನ್ಯಾ: ಈ ವಾರವು ನಿಮ್ಮ ಪಾಲಿಗೆ ಉತ್ತಮ ವಾರವೆನಿಸಲಿದ್ದು, ನಿಮ್ಮ ಅನೇಕ ಯೋಜನೆಗಳು ಫಲ ನೀಡಲಿವೆ. ನಿಮ್ಮ ವೃತ್ತಿಯಲ್ಲಿ ಉತ್ತಮ ಲಾಭ ಗಳಿಸಲಿದ್ದೀರಿ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯಲ್ಲಿಯೂ ಸುಧಾರಣೆ ಉಂಟಾಗಲಿದೆ. ನೀವು ನಿಮ್ಮ ಬದುಕಿನಲ್ಲಿ ಧನಾತ್ಮಕ ಬೆಳವಣಿಗೆಗಳನ್ನು ಕಾಣಲಿದ್ದೀರಿ ಹಾಗೂ ಸಮಾಜದಲ್ಲಿಯೂ ನಿಮಗೆ ಮನ್ನಣೆ ದೊರೆಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ನಿಮ್ಮ ವಿರೋಧಿಗಳನ್ನು ಸೋಲಿಸಲಿದ್ದೀರಿ. ಕಾನೂನು ಮತ್ತು ನ್ಯಾಯಾಂಗದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ವಿವಿಧ ಕೆಲಸಗಳನ್ನು ಸಾಧಿಸುವುದಕ್ಕಾಗಿ ನಿಮ್ಮ ಶಕ್ತಿಯನ್ನು ಫಲಪ್ರದವಾದ ರೀತಿಯಲ್ಲಿ ಬಳಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿರುವವರು ಉತ್ತಮ ಲಾಭ ಗಳಿಸಲಿದ್ದಾರೆ. ನಿಮ್ಮ ವೃತ್ತಿಯಲ್ಲಿ ಏರುಪೇರು ಉಂಟಾಗಲಿದೆ. ಪ್ರೇಮಿಗಳು ಎಚ್ಚರಿಕೆಯಿಂದ ಇರಬೇಕು. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ.

ತುಲಾ: ನೀವು ಈ ವಾರದಲ್ಲಿ ಒಂದಷ್ಟು ಒಳ್ಳೆಯ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನಿಮ್ಮ ಕುಟಂಬದಲ್ಲಿರುವ ಸಮಸ್ಯೆಗಳು ಬಗೆಹರಿಯಲಿದ್ದು ಪ್ರೀತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿರುವವರು ದೊಡ್ಡ ಮಟ್ಟದಲ್ಲಿ ಲಾಭ ಗಳಿಸಲಿದ್ದಾರೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ನಿಮ್ಮ ಬಾಸ್‌ನ ಮೆಚ್ಚುಗೆ ಗಳಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಉತ್ತಮ ಪ್ರಗತಿ ಸಾಧಿಸಲಿದ್ದಾರೆ. ನೀವು ಬೇರೆ ಬೇರೆ ಪಾರ್ಟಿಗಳಿಗೆ ಹೋಗುತ್ತೀರಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವಿವಾಹಿತ ಜೋಡಿಗಳು ತಮ್ಮ ಸಂಗಾತಿಯ ಅಗತ್ಯತೆಗಳನ್ನು ಪೂರೈಸಬೇಕು. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.

ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಈ ವಾರ ಹೆಚ್ಚು ಖರ್ಚು ಮಾಡಲಿದ್ದೀರಿ. ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಲಿದ್ದೀರಿ. ವಿವಾಹಿತ ಜೋಡಿಗಳ ವೈವಾಹಿಕ ಬದುಕು ಚೆನ್ನಾಗಿರಲಿದೆ ಹಾಗೂ ನಿಮ್ಮ ಜೀವನ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ಆನಂದಿಸಲಿದ್ದೀರಿ. ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಪ್ರೇಮಿಗಳು ಸಮಸ್ಯೆ ಎದುರಿಸಬಹುದು. ಹೀಗಾಗಿ, ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ ವಾರದ ಮಧ್ಯ ಭಾಗದಲ್ಲಿ ಹೋಗುವುದು ಒಳ್ಳೆಯದು.

ಧನು: ಇದು ನಿಮ್ಮ ಪಾಲಿಗೆ ಸಾಧಾರಣ ವಾರ ಎನಿಸಲಿದೆ. ನೀವು ನಿಮ್ಮ ಮಗ ಅಥವಾ ಮಗಳಿಗಾಗಿ ಏನಾದರೂ ಹೊಸದನ್ನು ಮಾಡುತ್ತೀರಿ. ನಿಮ್ಮ ಮಗ ಅಥವಾ ಮಗಳ ಮೇಲಿನ ಬಾಂಧವ್ಯವು ಸುಧಾರಿಸಲಿದೆ. ವೈವಾಹಿಕ ಬದುಕಿನ ಸಮಸ್ಯೆಗಳು ಕಡಿಮೆಯಾಗಲಿದ್ದು, ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧ ವೃದ್ಧಿಸಲಿದೆ. ಪ್ರೇಮಿಗಳು ತಮ್ಮ ಪ್ರಣಯದ ಬದುಕಿಗೆ ಇನ್ನಷ್ಟು ಮೆರುಗು ನೀಡಲಿದ್ದಾರೆ. ಅವಕಾಶಗಳು ನಿಮ್ಮ ಕೈ ತಪ್ಪದಂತೆ ನೋಡಿಕೊಳ್ಳಿ. ಈ ಸಮಯವು ವ್ಯಾಪಾರೋದ್ಯಮಿಗಳಿಗೆ ಸಾಧಾರಣ ವಾರವೆನಿಸಲಿದೆ. ಉದ್ಯೋಗದಲ್ಲಿರುವವರು ಏರುಪೇರು ಕಾಣಲಿದ್ದಾರೆ. ನಿಮ್ಮ ಕೆಲಸದತ್ತ ಪ್ರಾಮಾಣಿಕತೆ ತೋರಿಸಿ. ವಾರದ ಆರಂಭವು ಪ್ರವಾಸಕ್ಕೆ ಹೋಗಲು ನಿಮಗೆ ಸೂಕ್ತ.

ಮಕರ: ನೀವು ಈ ವಾರದಲ್ಲಿ ಹೊಸ ಅವಕಾಶಗಳನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸಬೇಕು. ವಿವಾಹಿತ ಜೋಡಿಗಳಿಗೆ ಇದು ಸಕಾಲ ಹಾಗೂ ನೀವು ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಆನಂದಿಸಲಿದ್ದೀರಿ. ಏಕೆಂದರೆ ನಿಮ್ಮ ಜೀವನ ಸಂಗಾತಿಯು ನಿಮ್ಮ ಪರಸ್ಪರ ಬಂಧವನ್ನು ಉತ್ತಮಪಡಿಸಲು ಪ್ರಯತ್ನಿಸಲಿದ್ದಾರೆ. ಈ ವಾರ ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಎಲ್ಲಾ ಸಂತೃಪ್ತಿಯನ್ನು ನೀಡಲು ಪ್ರಯತ್ನಿಸಲಿದ್ದು, ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ ನಿಮಗೆ ರಕ್ತದೊತ್ತಡದ ಸಮಸ್ಯೆ ಎದುರಾಗಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಉದ್ಯೋಗದಲ್ಲಿರುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ಕುಂಭ: ಇದು ನಿಮ್ಮ ಪಾಲಿಗೆ ಅತ್ಯಂತ ಫಲದಾಯಕ ವಾರ ಎನಿಸಲಿದೆ. ನಿಮ್ಮ ಶಕ್ತಿಯು ವೃದ್ಧಿಸಲಿದ್ದು, ಇದು ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ತಂದು ಕೊಡಲಿದೆ. ಈ ವಾರ ನಿಮಗೆ ಸಾಕಷ್ಟು ಬಿಡುವಿನ ಸಮಯ ದೊರೆಯಲಿದೆ. ಈ ಹೆಚ್ಚುವರಿ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಕಡೆ ಗಮನ ನೀಡಬಹುದು. ನಿಮ್ಮೆಲ್ಲಾ ಅಗತ್ಯತೆಗಳನ್ನು ಪೂರ್ಣಗೊಳಿಸಲು ನೀವು ಸಾಕಷ್ಟು ಪ್ರಯತ್ನಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ. ಈ ವಾರ ನಿಮ್ಮ ಸಂಗಾತಿ ನಿಮ್ಮನ್ನು ಹೊಗಳಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಪ್ರಗತಿ ದೊರೆಯಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ.

Leave a Comment

Your email address will not be published. Required fields are marked *