Ad Widget .

ಪುತ್ತೂರು: ಕಂಬಳ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಅಯ್ಯರ್ ಕೈಹಿಡಿದೆಳೆದ ಅಭಿಮಾನಿ| ಮುಜುಗರಕ್ಕೊಳಗಾದ ಬಿಗ್ ಬಾಸ್ ತಾರೆ

ಸಮಗ್ರ ನ್ಯೂಸ್: ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಿಗ್​ಬಾಸ್ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ನಡೆದಿದೆ.

Ad Widget . Ad Widget .

ನಟಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಎಂದು ಹೇಳಿ ಕಿರುಚುತ್ತಿದ್ದ ಅಭಿಮಾನಿ ಬಳಿಕ ವೇದಿಕೆಯಿಂದ ಇಳಿದ ನಟಿಯ ಕೈ ಹಿಡಿದಿದ್ದಾನೆ. ಈ ದಿಢೀರ್ ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ.

Ad Widget . Ad Widget .

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅದ್ಧೂರಿ ಕಂಬಳ ನಡೆಯುತ್ತಿದೆ. ಜಾತ್ರೆಯಂತೆ ಅದ್ಧೂರಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆಯ ಕೇರಳದಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ನಟಿ ಸಾನ್ಯಾ ಐಯ್ಯರ್ ಅವರು ಬಿಗ್​ಬಾಸ್ ಕನ್ನಡ ಒಟಿಟಿ ಹಾಗೂ ಬಿಗ್​ಬಾಸ್ ಸೀಸನ್ 9ರಲ್ಲಿ ಭಾಗವಹಿಸಿ ಹೆಚ್ಚು ಫೇಮಸ್ ಆಗಿದ್ದರು. ಇವರು ಕನ್ನಡ ಕಿರುತೆರೆಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟು ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Leave a Comment

Your email address will not be published. Required fields are marked *