ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ!? ಕಾರ್ಯಾಚರಣೆ ಚುರುಕು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಅರೋಪಿಗಳು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ ಐಎ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

Ad Widget ... ..

Ad Widget

ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಾದ ಶರೀಫ್ ಹಾಗೂ ಕೆ.ಎ.ಮಸೂದ್ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್ ಐ ಎ ಅಧಿಕಾರಿಗಳು ಇತ್ತೀಚೆಗೆ ಘೋಷಿಸಿದ್ದರು.

ಎನ್‌ಐಎ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ ಹಲವು ವಿಚಾರ ಪ್ರಸ್ತಾಪಿಸಲಾಗಿದ್ದು, ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್​, ಕೆ.ಎ.ಮಸೂದ್​ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಕಂಡು ಬಂದಿದ್ದು ಮೊಹಮ್ಮದ್​ ಮುಸ್ತಫಾ, ಎಂ.ಹೆಚ್​.ತುಫೈಲ್​​, ಎಂ.ಆರ್​.ಉಮರ್​ ಫಾರೂಕ್​, ಅಬೂಬಕರ್​​ ಸಿದ್ಧಿಕಿ ಎಂಬುವವರು ಅರಬ್​ ದೇಶದಲ್ಲಿ ಪತ್ತೆಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕರೆತರುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ. ಸೌದಿಯಲ್ಲಿ ಆರೋಪಿಗಳನ್ನು ಬಂಧಿಸಲು ಎನ್‌ಐಎ ಭಾರೀ ಪ್ಲ್ಯಾನ್‌ ಮಾಡಿದ್ದಾರೆ. ಆರೋಪಿಗಳು ಸೌದಿಯಲ್ಲಿ ಸೈಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ 6 ಆರೋಪಿಗಳ ಸುಳಿವಿಗೆ ಒಟ್ಟು 24 ಲಕ್ಷ ಬಹುಮಾನ ಘೋಷಣೆ‌ ಮಾಡಲಾಗಿತ್ತು.

Leave a Comment

Your email address will not be published. Required fields are marked *