Ad Widget .

ಪೇಸ್ ಬುಕ್ ನಲ್ಲಿ ಪರಿಚಯವಾಗಿ ಮನೆಬಿಟ್ಟು ಬಂದಾಕೆ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಫೇಸ್​​ಬುಕ್​​ನಲ್ಲಿ ಪರಿಚಯವಾಗಿ ಎಂಟು ತಿಂಗಳ ಹಿಂದೆ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದವಳು ಇದೀಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ.

Ad Widget . Ad Widget .

ಹಾಸನ ನಗರದ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನ ವಿಜಯನಗರದ ಸಿರಿಸ್​(22) ಮೃತ ಯುವತಿ. ಈಕೆಗೆ ಆದರ್ಶ್​ ಎಂಬಾತ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ. ಬಳಿಕ ಇವರಿಬ್ಬರು ಒಂದೇ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮದುವೆ ಆಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಡ್ಡೇನಹಳ್ಳಿಯಲ್ಲಿ ಮಾಲೀಕರಿಗೆ ಮದುವೆಯಾಗಿದೆ ಎಂದು ಹೇಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಇದೀಗ ಅದೇ ಬಾಡಿಗೆ ಮನೆಯಲ್ಲಿ ಸಿರಿಸ್​ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

Ad Widget . Ad Widget .

ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ ಗ್ರಾಮಕ್ಕೆ ಬಂದು ಮದುವೆಯಾಗಿದೆ ಎಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ, ಇದೀಗ ಸಿರಿಸ್ ಏಕಾಏಕಿ ಮೃತಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಘಟನಾ ಸ್ಥಳಕ್ಕೆ ASP ತಮ್ಮಯ್ಯ, DySP ಉದಯ್​ಭಾಸ್ಕರ್ ಭೇಟಿ ಪರಿಶೀಲನೆ ನಡೆಸಿದ್ದು, ನಿನ್ನೆ ರಾತ್ರಿ (ಜನವರಿ 26) ಸಿರಿಸ್​ ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಮೊದಲು ಬೆಂಗಳೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿರಿಸ್ ಅಲಿಯಾಸ್ ಸಿರಿ ಫೇಸ್​ಬುಕ್​ನಲ್ಲಿ ಆದರ್ಶ್​ ಪರಿಚಯವಾಗಿದೆ. ಬಳಿಕ ಬೆಂಗಳೂರು ಬಿಟ್ಟು ಹಾಸನಕ್ಕೆ ಆದರ್ಶ್​ ಹತ್ತಿರ ಹೋಗಿದ್ದು, ನಂತರ ಇಬ್ಬರೂ ಒಂದೇ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಇಬ್ಬರು ಮದುವೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಲಿವಿಂಗ್‌ ಟುಗೆದರ್​ನಲ್ಲಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *