Ad Widget .

ಹೃದಯಾಘಾತ; ಜೆಡಿಎಸ್ ಯುವಮುಂದಾಳು ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು ಆತಂಕ ಸೃಷ್ಟಿಸಿದೆ. ಇಂತಹ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಜೆಡಿಎಸ್​​ನ ಯುವ ಮುಖಂಡ, ತಂದೆ-ತಾಯಿಯ ಏಕೈಕ ಪುತ್ರ ಹೃದಯಾಘಾತದಿಂದಾಗಿ ಸಾವಿಗಿಡಾಗಿದ್ದಾನೆ.

Ad Widget . Ad Widget .

ಮಲ್ಲಾಘಟ್ಟ ವಾರ್ಡ್ ನೀಲತ್ತಹಳ್ಳಿ ಗೇಟ್ ನಿವಾಸಿ, ಜೆಡಿಎಸ್ ಯುವ ಮುಖಂಡ ಎಂ.ಜಿ.ಶ್ರೀನಿವಾಸ್ (32) ಸಾವಿಗೀಡಾದ ಯುವಕ. ಈತ ಗುರುವಾರ ರಾತ್ರಿ 9 ಗಂಟೆಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಈತ ಗಂಗಾಧರಯ್ಯ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ.

Ad Widget . Ad Widget .

ಶ್ರೀನಿವಾಸ ಗುರುವಾರ ಸಂಜೆ ಸ್ನೇಹಿತರೊಂದಿಗೆ ಕುಣಿಗಲ್ ಪಟ್ಟಣದ ಜಿಮ್ ತರಬೇತಿಗೆ ದಾಖಲಾತಿ ಪಡೆದು ಐದು ನಿಮಿಷ‌ ವರ್ಕೌಟ್ ಮಾಡಿ ಹೊರ ಬಂದಿದ್ದರು. ಇದಾದ ಕೆಲ ನಿಮಿಷದ ಬಳಿಕ ವಾಂತಿ ಆಗಿದ್ದು, ಭುಜ, ಕತ್ತು, ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪಟ್ಟಣದ ಖಾಸಗಿ ಕ್ಲಿನಿಕ್​ಗೆ ತೆರಳಿದ್ದು, ತಪಾಸಣೆ ಮಾಡಿಸಿಕೊಳ್ಳುತ್ತಿರುವಾಗಲೇ ಕುಸಿದುಬಿದ್ದರು. ಕೂಡಲೇ ಎಂಎಂ‌ ಆಸ್ಪತ್ರೆಗೆ ಅಂಬ್ಯುಲೆನ್ಸ್​​ನಲ್ಲಿ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಇದ್ದೊಬ್ಬ ಮಗನ ಮದುವೆ ಮಾಡುವ ಸಂಭ್ರಮದಲ್ಲಿದ್ದ ಕುಟುಂಬಸ್ಥರು ವಧು ಅನ್ವೇಷಣೆಗಾಗಿ ಭಾನುವಾರ ತೆರಳಲು ಸಿದ್ಧತೆಯಲ್ಲಿದ್ದರು. ಆದರೆ ಅಷ್ಟರೊಳಗೇ ಮಗನ ಅಕಾಲಿಕ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತ ನೀಡಿದೆ.

Leave a Comment

Your email address will not be published. Required fields are marked *