Ad Widget .

ಕೋನ್ ಐಸ್ ಕ್ರೀಮ್ ಮಾದರಿಯ ಬ್ರಾ ಧರಿಸಿ ಟ್ರೋಲ್ ಆದ ಉರ್ಫಿ| ಇಲ್ಲಿದೆ ಈ ನಟಿಮಣಿಯ ಹೊಸ ಅವತಾರದ ವಿಡಿಯೋ…

ಸಮಗ್ರ ನ್ಯೂಸ್: ನಟಿ-ಮಾಡೆಲ್ ಮತ್ತು ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಯಾವಾಗಲೂ ತಮ್ಮ ಬಟ್ಟೆಯ ವಿನ್ಯಾಸದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಇದಕ್ಕಾಗಿ ಅವರು ನಿರಂತರವಾಗಿ ಟ್ರೋಲಿಂಗ್ ಗಳನ್ನು ಎದುರಿಸಬೇಕಾಗುತ್ತದೆ.

Ad Widget . Ad Widget .

ಆದರೆ ಉರ್ಫಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವುಗಳಿಗೆ ತಮ್ಮ ಹರಿತವಾದ ಟ್ವೀಟ್ ಮೂಲಕ ಉತ್ತರ ನೀಡುವುದರ ಮೂಲಕ ವಿಭಿನ್ನ ರೀತಿಯ ಬಟ್ಟೆ ಧರಿಸುವುದನ್ನು ಮುಂದುವರೆಸಿದ್ದಾರೆ.ಇದಕ್ಕೆ ಇತ್ತೀಚಿನ ನಿದರ್ಶನ ಎನ್ನುವಂತೆ ಐಸ್ ಕ್ರೀಮ್ ಕೋನ್ ಬ್ರ್ಯಾಲೆಟ್ ಮತ್ತು ವೆಲ್ವೆಟ್ ಸ್ಕರ್ಟ್‌ ಧರಿಸಿ ಪೋಸ್ ನೀಡಿರುವ ವಿಡಿಯೋ ಈಗ ವೈರಲ್ ಆಗಿದೆ.ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಅವಕ್ಕಾಗಿದ್ದಾರೆ.ಕೆಲವರು ಆಕೆಯನ್ನು ಬಹಿರಂಗಪಡಿಸುವ ಉಡುಪನ್ನು ಧರಿಸಿದ್ದಕ್ಕಾಗಿ ದೂಷಿಸಿದರೆ, ಇತರರು ಆಕೆಯ ಅಸಾಂಪ್ರದಾಯಿಕ ಮತ್ತು ಫ್ಯಾಷನ್ ಪ್ರಜ್ಞೆಯನ್ನು ಶ್ಲಾಘಿಸಿದರು.

Ad Widget . Ad Widget .

ಬಿಗ್ ಬಾಸ್ ಒಟಿಟಿ ಸೀಸನ್ 1 ರ ಮಾಜಿ ಸ್ಪರ್ಧಿಯಾಗಿರುವ ಉರ್ಫಿ ಇತ್ತೀಚೆಗೆ ‘ಸಾರ್ವಜನಿಕ ನಗ್ನತೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ’ ಬಿಜೆಪಿ ನಾಯಕಿ ಚಿತ್ರಾ ಕಿಶೋರ್ ವಾಘ್ ಅವರ ವಿರುದ್ಧ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಂಬೋಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದ ನಂತರ ಸುದ್ದಿಯಲ್ಲಿದ್ದರು.

Leave a Comment

Your email address will not be published. Required fields are marked *