Ad Widget .

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ|ಸುಳ್ಯದಲ್ಲಿ ನಾಲ್ಕು ಹಿಂದು ಯುವಕರನ್ನು ಗುರಿಯಾಗಿರಿಸಿ ಹತ್ಯೆ|ಇಂಚಿಂಚು ಮಾಹಿತಿ ಕಲೆ ಹಾಕಿದ ಎನ್ಐಎ

ಸಮಗ್ರ ನ್ಯೂಸ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಇಂಚಿಂಚು ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಕಲೆಹಾಕಿದ್ದು, ಬೆಂಗಳೂರಿನ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹತ್ಯೆಗಾಗಿ ಪಿಎಫ್ಐ ಸಂಘಟನೆ ನಡೆಸಿದ್ದ ಭಯಾನಕ ಸಂಚನ್ನು ಉಲ್ಲೇಖ ಮಾಡಿದ್ದಾರೆ.

Ad Widget . Ad Widget .

ಪ್ರವೀಣ್ ನೆಟ್ಟಾರು ಹತ್ಯೆ ಅದೇನೋ ಕ್ರಿಯೆಗೆ ಪ್ರತಿಕ್ರಿಯೆ ಅನ್ನೋ ರೀತಿ ಮಾಡಿದ್ದಾರೆ ಅಂದ್ಕೊಂಡರೆ ತಪ್ಪಾಗುತ್ತದೆ. ಎಲ್ಲವನ್ನೂ ಕರಾರುವಾಕ್ ಮಾಡಿದ್ದಾರೆ, ಅಷ್ಟೇ ಅಲ್ಲ, ಸುಳ್ಯದಲ್ಲಿ ಪ್ರವೀಣ್ ಸೇರಿದಂತೆ ನಾಲ್ಕು ಹಿಂದು ಯುವಕರನ್ನು ಗುರಿಯಾಗಿರಿಸಿ ಹತ್ಯೆಗೆ ಸಂಚು ಹೆಣೆದಿದ್ದರು. ಇದನ್ನು ಕಾರ್ಯಗತ ಮಾಡಲು ಪಿಎಫ್ಐ ಸಂಘಟನೆಯ ರಾಜ್ಯ ನಾಯಕರೇ ಸಂಚು ರೂಪಿಸಿದ್ದರು ಅನ್ನೋದನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Ad Widget . Ad Widget .

ಹಿಂದು ಮುಖಂಡರ ಹತ್ಯೆಗಾಗಿ ಸರ್ವೀಸ್ ಟೀಂ :
ಕರಾವಳಿಯಲ್ಲಿ ಕೋಮು ದ್ವೇಷದ ಹತ್ಯೆಗಳು ಹೆಚ್ಚುತ್ತಿದ್ದಂತೆ, ಅದಕ್ಕೆ ಪ್ರತೀಕಾರ ತೀರಿಸಬೇಕು ಮತ್ತು ಹಿಂದುಗಳನ್ನು ಭಯಾನಕ ರೀತಿಯಲ್ಲಿ ಕೊಂದು ಸಮಾಜದಲ್ಲಿ ಭಯ ಮೂಡಿಸಬೇಕು ಅಂತಲೇ ಪಿಎಫ್ಐ ನಾಯಕರು ಭಾರೀ ಸಂಚು ಹೆಣೆದಿದ್ದರು. ಅಷ್ಟೇ ಅಲ್ಲ, ಒಂದು ಕೊಲೆಗೆ ನಾಲ್ವರನ್ನು ಕೊಲ್ಲುವುದಕ್ಕಾಗಿ ತರಬೇತುಗೊಳಿಸಿದ ಯುವಕರನ್ನು ರೆಡಿ ಮಾಡಿದ್ದರು. ಅದಕ್ಕೆ ಸರ್ವಿಸ್ ಟೀಮ್ ಎಂದು ಹೆಸರಿಟ್ಟು ಆಯಾ ಜಿಲ್ಲೆಗಳಲ್ಲಿ ಅದಕ್ಕೊಬ್ಬ ಲೀಡರನ್ನೂ ಮಾಡಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸಮೀಪದ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಈ ತಂಡಕ್ಕೆ ಯುವಕರನ್ನು ಸೇರಿಸುವ ಪ್ರಕ್ರಿಯೆ ನಡೆದಿತ್ತು. ಇದರ ಉಸ್ತುವಾರಿ ವಹಿಸ್ಕೊಂಡಿದ್ದ ಮಸೂದ್ ಅಗ್ನಾಡಿ ಪಿಎಫ್ಐ ರಾಜ್ಯ ನಾಯಕನಾಗಿ ಗುರುತಿಸಿಕೊಂಡಿದ್ದ. ಅಷ್ಟೇ ಅಲ್ಲ, ಈ ಸರ್ವಿಸ್ ಟೀಮ್ ಅನ್ನೋ ತಂಡಕ್ಕೆ ಸ್ಥಳೀಯ ಪ್ರಮುಖರನ್ನು ನೇಮಕ ಮಾಡಿದ್ದ.

ಕಳೆದ 2016ರಲ್ಲಿ ಬೆಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡ ರುದ್ರೇಶ್ ಹತ್ಯೆಯನ್ನೂ ಮಾಡಿದ್ದು ಇದೇ ರೀತಿಯ ಪಿಎಫ್ಐ ತಂಡದ ಸದಸ್ಯರಾಗಿದ್ದರು. ಆ ಪ್ರಕರಣದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಸದಸ್ಯರು ಅರೆಸ್ಟ್ ಆಗಿದ್ದರು. ರುದ್ರೇಶ್ ಹತ್ಯೆ ನಂತರ, ಕೇರಳ ಮಾದರಿಯಲ್ಲಿ ಹಿಂದು ಮುಖಂಡರ ಹತ್ಯೆಗೆಂದೇ ಪ್ರತ್ಯೇಕ ತಂಡವನ್ನು ರಚಿಸಲು ಪಿಎಫ್ಐ ನಾಯಕರು ಚಿಂತಿಸಿ ರೆಡಿ ಮಾಡಿದ್ದೇ ಈ ಸರ್ವಿಸ್ ಟೀಮ್. ಪಿಎಫ್ಐ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ನಾಯಕರು ಸಾಕಷ್ಟು ಚರ್ಚಿಸಿಯೇ ಈ ತಂಡವನ್ನು ರೆಡಿ ಮಾಡಿದ್ದರು. ತಂಡಕ್ಕೆ ಸೇರಿದ ಯುವಕರಿಗೆ ಏನೇ ಸಮಸ್ಯೆ ಆದರೂ ಕುಟುಂಬಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದು, ಆತ ಪೊಲೀಸರಿಗೆ ಸಿಕ್ಕಿಬಿದ್ದರೆ ಕಾನೂನು ನೆರವು ನೀಡುವುದು, ಆರ್ಥಿಕ ಸಮಸ್ಯೆ ಕಾಡದಂತೆ ಕುಟುಂಬಕ್ಕೆ ಇಡುಗಂಟು ನೀಡುವುದು ಇತ್ಯಾದಿಯನ್ನೂ ಪಿಎಫ್ಐ ನಾಯಕರು ಹೊತ್ತುಕೊಂಡಿದ್ದರು.

ಸರ್ವಿಸ್ ಟೀಂನಲ್ಲಿ ಪಿಎಫ್‌ಐ ಸದಸ್ಯರೆಲ್ಲರಿಗೂ ಅವಕಾಶವಿತ್ತು. ಆದರೆ ಶಾರೀರಿಕವಾಗಿ ಗಟ್ಟಿಮುಟ್ಟಾದ ಯುವಕರನ್ನೇ ತಂಡಕ್ಕೆ ಆಯ್ದುಕೊಳ್ಳುತ್ತಿದ್ದರು. ಒಂದು ಬಾರಿ ಸರ್ವಿಸ್ ಟೀಮ್ ಸದಸ್ಯರಾದರೆ, ಬೇರೆ ಯಾವುದೇ ಅಂಗಸಂಸ್ಥೆಯಲ್ಲೂ ಅವರಿಗೆ ಅವಕಾಶ ಇರುತ್ತಿರಲಿಲ್ಲ. ಅವರನ್ನು ಹಿಂದು ದ್ವೇಷದಿಂದ ತೀವ್ರವಾಗಿ ಬ್ರೇನ್ ವಾಷ್ ಮಾಡಿ, ಭೀಕರ ಹತ್ಯೆಗಾಗಿ ಹುರಿಗೊಳಿಸುತ್ತಿದ್ದರು. ಯುವಕರನ್ನು ಸುಳ್ಯ, ಪುತ್ತೂರಿನಲ್ಲಿ ಸ್ಥಳೀಯವಾಗಿ ರೆಡಿ ಮಾಡಲು ಮುಸ್ತಫಾ ಪೈಚಾರ್ ಮತ್ತು ಮಸೂದ್ ತರಬೇತು ಮಾಡ್ತಿದ್ದರು ಅನ್ನೋದನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆಯ್ಕೆಯಾದವರಿಗೆ ಮಾರಕಾಸ್ತ್ರ ಬಳಕೆ ಬಗ್ಗೆಯೂ ತರಬೇತಿ ನೀಡಲಾಗಿತ್ತು.

ಭಯ ಮೂಡಿಸುವುದೇ ಹತ್ಯೆ ಉದ್ದೇಶ:
ಯಾವುದೇ ಹತ್ಯೆ ನಡೆದರೂ, ಪ್ರತಿಯಾಗಿ ಹಿಂದು ಮುಖಂಡರ ಹತ್ಯೆ ನಡೆಸುವುದು, ಆಮೂಲಕ ಸಮಾಜದಲ್ಲಿ ಭಯ ಮೂಡಿಸುವುದೇ ಪಿಎಫ್ಐ ನಾಯಕರ ತಂತ್ರವಾಗಿತ್ತು. ಈ ರೀತಿಯ ಹತ್ಯೆಗಳಿಂದ ಹಿಂದು ಮುಖಂಡರೇ ಭಯಗೊಂಡು ಸಮಾಜದ ಚಟುವಟಿಕೆಯಿಂದ ಹಿಂದೆ ಸರಿದರೆ, ನಿಧಾನಕ್ಕೆ ಹಿಂದು ಸಮಾಜ ಸುಮ್ಮನಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡಿ ಅರಾಜಕತೆ ಸೃಷ್ಟಿಸುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ಅಷ್ಟೇ ಅಲ್ಲ, ಇದೇ ರೀತಿ ಮುಂದುವರಿದ್ರೆ 2047ರಲ್ಲಿ ಇಸ್ಲಾಮಿಕ್ ಇಂಡಿಯಾ ನಿರ್ಮಿಸುವ ಪಿಎಫ್ಐ ಅಜೆಂಡಾ ಸಕ್ಸಸ್ ಆಗುತ್ತೆ ಅನ್ನುವ ದೂರಗಾಮಿ ಚಿಂತನೆಯೂ ಅವರಲ್ಲಿತ್ತು.

ಸುಳ್ಯದ ಬೆಳ್ಳಾರೆಯಲ್ಲಿ 2022ರ ಜುಲೈ 21ರಂದು ಮಸೂದ್ ಎಂಬ ಯುವಕ ಸಾವನ್ನಪ್ಪಿದ್ದ. ಗಾಂಜಾ ವಿಚಾರದಲ್ಲಿ ಜಗಳ ನಡೆದು ಹೊಡೆದಾಟದಲ್ಲಿ ಗಾಯಗೊಂಡು ಮೃತನಾಗಿದ್ದರೂ, ಪಿಎಎಫ್ಐ ನಾಯಕರು ಅದರ ನೆಪದಲ್ಲಿ ನಾಲ್ವರ ಹತ್ಯೆಗೆ ಸಂಚು ಹೆಣೆದಿದ್ದರು. ಮಸೂದ್ ಅಂತ್ಯಕ್ರಿಯೆ ಸಂದರ್ಭದಲ್ಲಿಯೇ ಆರೋಪಿಗಳಾದ ಶಿಯಾಬ್, ರಿಯಾಜ್, ಬಷೀರ್, ಮುಸ್ತಫಾ ಪೈಚಾರ್ ಸೇರಿದಂತೆ 13 ಆರೋಪಿಗಳು ಭಾಗಿಯಾಗಿ ಹತ್ಯೆಗೆ ಪ್ರತೀಕಾರ ತೀರಿಸುವ ಪ್ರತಿಜ್ಞೆ ಮಾಡಿದ್ದರು. ಪಿಎಫ್ಐ ಮತ್ತು ಎಸ್ಡಿಪಿಐ ಮುಖಂಡರಾದ ಜಾಬೀರ್ ಅರಿಯಡ್ಕ, ಇಸ್ಮಾಯಿಲ್ ಷರೀಫ್ ಮತ್ತು ಮೊಹಮ್ಮದ್ ಇಕ್ಬಾಲ್ ಬೆಳ್ಳಾರೆ ಸ್ಥಳದಲ್ಲಿಯೇ ಪ್ರಚೋದನಕಾರಿ ಭಾಷಣವನ್ನೂ ಮಾಡಿದ್ದರು. ಆನಂತರ, ಸರ್ವಿಸ್ ಟೀಮ್ ಮೂಲಕ ರಾಜ್ಯ ನಾಯಕರ ಅಣತಿಯಂತೆ ಪ್ರವೀಣ್ ಹತ್ಯೆ ಮಾಡಲಾಗಿತ್ತು. ಸದ್ಯಕ್ಕೆ ಪ್ರಕರಣದಲ್ಲಿ 14 ಮಂದಿ ಬಂಧನ ಆಗಿದ್ದು ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ಹತ್ಯೆಗಾಗಿ ಸರಣಿ ಸಭೆ ನಡೆಸಿದ್ದ ನಾಯಕರು:
ಮಸೂದ್ ಸಾವಿನ ಬೆನ್ನಲ್ಲೇ ಅದಕ್ಕೆ ಪ್ರತೀಕಾರ ತೀರಿಸಲೇಬೇಕು ಎನ್ನುವ ಗುರಿಯಿಟ್ಟು ಪಿಎಫ್ಐ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದರು. ಜುಲೈ 23ರಂದು ಬೆಂಗಳೂರಿನ ಪಿಎಫ್ಐ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದು, ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖಂಡರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಸರ್ವೀಸ್ ಟೀಂಗೆ ಓರ್ವ ಹಿಂದೂ ಮುಖಂಡನ ಹತ್ಯೆ ನಡೆಸಲು ನಿರ್ಧರಿಸಲಾಗಿತ್ತು. ಸಭೆಯಲ್ಲಿ ರಾಜ್ಯ ನಾಯಕರಾದ ಶರೀಫ್ ಕೋಡಾಜೆ ಮತ್ತು ಮಸೂದ್ ಅಗ್ನಾಡಿ ಭಾಗವಹಿಸಿದ್ದರು. ಇವರಿಂದ ಮಾಹಿತಿ ಪಡೆದ ಮುಸ್ತಫಾ ಪೈಚಾರ್, ಶಾಹೀದ್ ಅನ್ನುವಾತನ ಮನೆಯಲ್ಲಿ ರಹಸ್ಯ ಸಭೆ ನಡೆಸಿದ್ದ. ಸಭೆಯಲ್ಲಿ ಪ್ರವೀಣ್ ನೆಟ್ಟಾರು ಸೇರಿದಂತೆ ಸುಲಭದ ಗುರಿಯಾಗುವ ಹಲವು ಮುಖಂಡರ ಹೆಸರು ಪ್ರಸ್ತಾಪ ಆಗಿತ್ತು. ಇದೇ ವೇಳೆ ಆರೋಪಿ ಶಾಹೀದ್, ತನ್ನದೇ ಕೈಬರಹದಲ್ಲಿ ಹತ್ಯೆಯ ಸ್ಕೆಚ್ ಸಿದ್ಧಪಡಿಸಿದ್ದ. ಸ್ಕೆಚ್ ಬಗ್ಗೆ ಸಭೆಯಲ್ಲಿದ್ದವರಿಗೆ ಮುಸ್ತಫಾ ಪೈಚಾರ್ ಮತ್ತು ಮೊಹಮ್ಮದ್ ಇಕ್ಬಾಲ್ ವಿವರಣೆ ನೀಡಿದ್ದರು. ಆನಂತರ, ಪ್ರಕರಣದ ಮೊದಲ ಆರೋಪಿ ಶಿಯಾಬ್ ಹತ್ಯೆ ಕೃತ್ಯಕ್ಕಾಗಿ ಹಿಟ್ ಟೀಂ ಸಿದ್ದಪಡಿಸಲು ಮುಂದಾಗಿದ್ದ.

ಹಿಟ್ ಟೀಮ್ ನೇತೃತ್ವ ವಹಿಸಿದ್ದ ಶಿಹಾಬ್:
ಹಿಟ್ ಟೀಂ ನೇತೃತ್ವ ವಹಿಸಿಕೊಂಡಿದ್ದ ಎ1 ಶಿಯಾಬ್, ಜುಲೈ 24ರಂದು ಸುಳ್ಯದಲ್ಲಿ ಮೀಟಿಂಗ್ ಮಾಡಿದ್ದರು. ಶಿಯಾಬ್ ಜೊತೆಗೆ ಬಷೀರ್, ರಿಯಾಜ್, ಸಿದ್ಧಿಕ್, ನೌಫಾಲ್, ಕಬೀರ್, ಸೈನುಲ್ ಅಬೀದ್ ಪಾಲ್ಗೊಂಡಿದ್ದರು. ಸಿದ್ದಿಕ್ ಮತ್ತು ನೌಫಾಲ್, ಪ್ರವೀಣ್ ಸೇರಿ ನಾಲ್ವರು ಸ್ಥಳೀಯ ಹಿಂದು ಪ್ರಮುಖರ ಬಗ್ಗೆ ಮಾಹಿತಿ ಕಲೆಹಾಕಿ ಸಭೆಯಲ್ಲಿ ತಿಳಿಸಿದ್ದರು. 25 ಮತ್ತು 26ರಂದು ನಾಲ್ವರಲ್ಲಿ ಯಾರು ಸುಲಭದ ಗುರಿಯಾಗುತ್ತಾರೋ ಅವರನ್ನು ಹೊಡೆಯಲು ಸ್ಕೆಚ್ ಹಾಕಿದ್ದರು. ಪ್ರವೀಣ್ ಸಹಿತ ಹಿಟ್ ಲಿಸ್ಟ್ ನಲ್ಲಿದ್ದ ನಾಲ್ವರ ಬಗೆಗೂ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದೇ ವೇಳೆ ಸಿಸಿಟಿವಿ ಎಲ್ಲೆಲ್ಲಿ ಇವೆ ಅನ್ನೋದ್ರ ಬಗ್ಗೆಯೂ ಗಮನ ಹರಿಸಿದ್ದರು. ಜುಲೈ 26ರಂದು ರಾತ್ರಿ 8.30ಕ್ಕೆ ಮುಸ್ತಫಾ ಪೈಚಾರ್, ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ತನ್ನ ಚಿಕನ್ ಅಂಗಡಿಯನ್ನು ಎಂದಿನಂತೆ ಬಾಗಿಲು ಹಾಕಿ ಹೊರಡುವುದನ್ನು ಗಮನಿಸ್ತಿದ್ದ. ಕೂಡಲೇ ಸ್ಥಳಕ್ಕೆ ಬರುವಂತೆ ಶಿಯಾಬ್, ಬಷೀರ್ ಮತ್ತು ರಿಯಾಜ್‌ಗೆ ತಿಳಿಸಿದ್ದು, ದೂರದಲ್ಲಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದ ಮೂವರು ಪ್ರವೀಣ್ ಅಂಗಡಿಯಿಂದ ಹೊರಬರ್ತಿದ್ದಂತೆ ದಾಳಿ ನಡೆಸಿದ್ದರು. ಬೈಕ್‌ನಲ್ಲಿದ್ದ ರಿಯಾಜ್ ಇಬ್ಬರು ಹಂತಕರನ್ನೂ ಹತ್ತಿಸಿಕೊಂಡು ಎಸ್ಕೇಪ್ ಆಗಿದ್ದ. ಮಡಿಕೇರಿಯಲ್ಲಿದ್ದ ತುಫೈಲ್, ಆರೋಪಿಗಳನ್ನು ಮಡಿಕೇರಿ, ಕೊಪ್ಪ ಮತ್ತು ಚಾಮರಾಜನಗರದಲ್ಲಿ ಅಡಗಿಕೊಳ್ಳಲು ಸಹಾಯ ಮಾಡಿದ್ದ ಅನ್ನುವುದನ್ನು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

Leave a Comment

Your email address will not be published. Required fields are marked *