Ad Widget .

‘ಕರ್ನಾಟಕ ಸರ್ವೀಸ್ ನೀಡುವ ಬಸ್ ಗಳಿಗೆ ಅಲ್ಲೇ ಇಂಧನ ತುಂಬಿಸಿ’| ಕೇರಳ ಸಾರಿಗೆ ಬಸ್ ನಿಗಮದಿಂದ ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಗೆ ಸರ್ವಿಸ್‌ ನಡೆಸುವ ಎಲ್ಲ ಕೇರಳ ಸಾರಿಗೆ ಬಸ್‌ಗಳು ಕರ್ನಾಟಕದ ಬಂಕ್‌ಗಳಿಂದ ಡೀಸೆಲ್‌ ತುಂಬಿಸಿದರೆ ಕೇರಳ ಸಾರಿಗೆ ನಿಗಮ ಪ್ರತಿದಿನ 50 ಸಾವಿರ ರೂ. ಲಾಭ ಗಳಿಸಬಹುದಾಗಿದೆ. ಹೀಗಾಗಿ ಇಲ್ಲೇ ಡೀಸೆಲ್‌ ತುಂಬಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Ad Widget . Ad Widget .

ಕೇರಳ ಮತ್ತು ಕರ್ನಾಟಕದಲ್ಲಿ ಡೀಸೆಲ್‌ಗೆ 8 ರಿಂದ 9 ರೂ.ವರೆಗೆ ದರ ವ್ಯತ್ಯಾಸವಿದೆ. ಕರ್ನಾಟಕಕ್ಕೆ ತೆರಳುವ ಬಸ್‌ಗಳಿಗೆ ಪ್ರತಿದಿನ 6 ಸಾವಿರ ಲೀ. ಡೀಸೆಲ್‌ ಅಗತ್ಯವಿದ್ದು, ಕರ್ನಾಟಕದಲ್ಲಿ ಡೀಸೆಲ್‌ ತುಂಬಿಸಿದರೆ ನಿಗಮಕ್ಕೆ ಪ್ರತಿ ದಿನ 50,000 ಹಾಗೂ ಪ್ರತಿ ತಿಂಗಳು 15 ರಿಂದ 16 ಲಕ್ಷ ರೂ.ವರೆಗೆ ಉಳಿಕೆಯಾಗಲಿದೆ.

Ad Widget . Ad Widget .

ಕಾಸರಗೋಡು ಡಿಪೋ ಮಾತ್ರವಲ್ಲದೆ ತಲಶ್ಶೇರಿಯ 4, ಪಯ್ಯನ್ನೂರಿನ 4, ಕಾಞಂಗಾಡಿನ 1, ಕಣ್ಣೂರಿನ 1 ಮಂಗಳೂರಿಗೆ ದೀರ್ಘ ದೂರ ಸೇವೆ ಒದಗಿಸುತ್ತಿವೆ. ಕೊಲ್ಲೂರಿಗೆ 4, ಮಂಗಳೂರಿಗೆ 3, ಸುಳ್ಯಕ್ಕೆ 1 ಸಹಿತ ದೂರ ಸೇವೆ ನೀಡುವ ವೋಲ್ವೋ ಮತ್ತು ಸ್ಕ್ಯಾನಿಯಾ, ಕೆ-ಸ್ವಿಫ್ಟ್‌ ಬಸ್‌ಗಳು ಕಾಸರಗೋಡು ಮೂಲಕ ಕರ್ನಾಟಕಕ್ಕೆ ತೆರಳುತ್ತಿವೆ. ದೀರ್ಘ ದೂರದ ಸೇವೆ ನಡೆಸುವ ಬಸ್‌ಗೆ ಪ್ರತಿದಿನ 250 ರಿಂದ 400 ಲೀ. ಡೀಸೆಲ್‌ ಅಗತ್ಯವಿದೆ.

ವಯನಾಡ್‌ ಮೂಲಕ ಸೇವೆ ನಡೆಸುವ ಬಸ್‌ಗಳಿಗೆ ಕರ್ನಾಟಕದಲ್ಲಿ ಇಂಧನ ತುಂಬಿಸುವಂತೆ ಕೆಎಸ್‌ಆರ್‌ಟಿಸಿ ಎಂಡಿ ಸೂಚನೆ ನೀಡಿದ್ದಾರೆ. ಇದರಿಂದ ಕೇವಲ 17 ಸರ್ವಿಸ್‌ ಮೂಲಕ ಕೆ-ಸ್ವಿಫ್ಟ್‌ ಬಸ್‌ಗಳಿಗೆ ಒಂದು ತಿಂಗಳೊಳಗೆ 3 ಲಕ್ಷ ರೂ.ಗೂ ಹೆಚ್ಚು ಲಾಭವಾಗಿದೆ. ಕಾಸರಗೋಡು ಡಿಪೋದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳೂ ಈ ಸೌಲಭ್ಯದ ಪ್ರಯೋಜನ ಪಡೆದರೆ ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಕಾಸರಗೋಡಿನಿಂದ ಪ್ರತಿದಿನ 30ಕ್ಕೂ ಹೆಚ್ಚು ಬಸ್‌ಗಳು ಮಂಗಳೂರಿಗೆ ತೆರಳುತ್ತಿವೆ. ಸುಳ್ಯ, ಪುತ್ತೂರಿಗೆ 15ಕ್ಕೂ ಹೆಚ್ಚು ಬಸ್‌ಗಳು ಪ್ರತ್ಯೇಕ ಸೇವೆ ನೀಡುತ್ತಿವೆ. ಮಂಗಳೂರು ಕೊಲ್ಲೂರು ಸಹಿತ 10ಕ್ಕೂ ಹೆಚ್ಚು ಬಸ್‌ಗಳು ದೀರ್ಘ ದೂರದ ಸರ್ವಿಸ್‌ ನಡೆಸುತ್ತಿವೆ. ಆದರೆ ಹೆಚ್ಚಿನ ಬಸ್‌ಗಳಿಗೆ ಕೇರಳದಲ್ಲಿ ಇಂಧನ ತುಂಬಿಸಲಾಗುತ್ತಿದೆ.

ಕರ್ನಾಟಕದಲ್ಲಿ ಡೀಸೆಲ್‌ ತುಂಬಿಸಿದ ಕಾರಣ 17 ಬಸ್‌ಗಳಿಂದ ಪ್ರತಿ ತಿಂಗಳು 3.15 ಲಕ್ಷ ರೂ. ಕೆಎಸ್‌ಆರ್‌ಟಿಸಿಗೆ ಉಳಿಕೆಯಾಗಿದೆ. ಮಾನಂತವಾಡಿ ಮೂಲಕ 15 ಸ್ವಿಫ್ಟ್‌ ಬಸ್‌ಗಳು ಕರ್ನಾಟಕಕ್ಕೆ ತೆರಳುತ್ತಿವೆ. ಬೆಂಗಳೂರಿನಿಂದ ಎರಡು ಸ್ವಿಫ್ಟ್‌ ಬಸ್‌ಗಳು ಕೇರಳಕ್ಕೆ ಬರುತ್ತಿವೆ. ಪ್ರತಿ ದಿನ 1,500 ಲೀ. ಡೀಸೆಲ್‌ ಕರ್ನಾಟಕದ ಪಂಪ್‌ಗಳಿಂದ ತುಂಬಿಸಲಾಗುತ್ತಿದೆ.

ಕೇರಳದಲ್ಲಿ ಡೀಸೆಲ್‌ಗೆ 95.66 ರೂ. ಬೆಲೆಯಾದರೆ ಕರ್ನಾಟಕದಲ್ಲಿ87.36 ರೂ.ಗೆ ಲಭಿಸುತ್ತಿದೆ. ಕರ್ನಾಟಕದಿಂದ ಇಂಧನ ತುಂಬಿಸಲು ಪ್ರತ್ಯೇಕ ಫ್ಯುಯಲ್‌ ಕಾರ್ಡ್‌ ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಈ ಮೊದಲು ಕರ್ನಾಟಕಕ್ಕೆ ತೆರಳುವ ಬಸ್‌ಗಳು ಪಾಲಕ್ಕಾಡ್‌ನ ಕೆಎಸ್‌ಆರ್‌ಟಿಸಿ ಡಿಪೋದಿಂದ ಡೀಸೆಲ್‌ ತುಂಬಿಸುತ್ತಿದ್ದವು.

Leave a Comment

Your email address will not be published. Required fields are marked *