Ad Widget .

ಹಲವು ದಾಖಲೆ‌ ಉಡೀಸ್ ಮಾಡಿ ಭರ್ಜರಿ ಕಲೆಕ್ಷನ್ ಮಾಡಿದ ‘ಕ್ರಾಂತಿ’| ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಭಾರೀ ಕುತೂಹಲ ಮೂಡಿಸಿದ್ದ ಕ್ರಾಂತಿ ಚಿತ್ರ ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಓಪನಿಂಗ್ ಪಡೆದು ಅತೀ ಹೆಚ್ಚು ಗಳಿಕೆ ಪಡೆದ 5ನೇ ಕನ್ನಡ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿದೆ.

Ad Widget . Ad Widget .

ಬಹಿಷ್ಕಾರದ ನಡುವೆಯೂ ಅಭಿಮಾನಿಗಳ ಪ್ರಚಾರದಿಂದ ಕುತೂಹಲ ಮೂಡಿಸಿದ್ದ ಕ್ರಾಂತಿ ಚಿತ್ರ ಮೂಲಗಳ ಪ್ರಕಾರ ಮೊದಲ ದಿನವೇ 12ರಿಂದ 13 ಕೋಟಿ ರೂ.ಗಳಿಸಿದೆ. ಈ ಮೂಲಕ ಮೊದಲ ದಿನ ಅತೀ ಹೆಚ್ಚು ಗಳಿಸಿದ 5ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Ad Widget . Ad Widget .

ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ಅಭಿನಯಿಸಿದ ಎರಡನೇ ಚಿತ್ರ ಇದಾಗಿದ್ದು, ಸುಮಾರು 16 ಕೋಟಿ ರೂ.ನಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರ ಸಕ್ಸಸ್ ಆಗಬೇಕಾದರೆ 34 ಕೋಟಿ ರೂ. ಗಳಿಸಬೇಕಿದೆ. ಏಕೆಂದರೆ ಇದಲ್ಲಿ ವಿತರಕರ ಕಮಿಷನ್ ಸೇರಿದಂತೆ ವಿವಿಧ ವೆಚ್ಚಗಳು ಕಡಿತಗೊಳ್ಳಲಿವೆ.

ಕರ್ನಾಟಕದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಯಶ್ ಅಭಿನಯದ ಕೆಜಿಎಫ್-2 ಇದೆ. ಈ ಚಿತ್ರ ಮೊದಲ ದಿನ 29.8 ಕೋಟಿ ಸಂಗ್ರಹಿಸಿತ್ತು. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ 28 ಕೋಟಿ ಗಳಿಕೆಯೊಂದಿಗೆ 2ನೇ ಸ್ಥಾನದಲ್ಲಿದೆ.

ಸುದೀಪ್ ಅಭಿನಯದ ವಿಕ್ರಾಂತ್ ರೋಣ 23.85 ಕೋಟಿಯೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ, ದರ್ಶನ್ ಅಭಿನಯದ ರಾಬರ್ಟ್ ಚಿತ್ರ 17.8 ಕೋಟಿ ಸಂಗ್ರಹಿಸಿ 4ನೇ ಸ್ಥಾನ ಗಳಿಸಿದೆ. ಇದೀಗ ಕ್ರಾಂತಿ 13 ಕೋಟಿಯೊಂದಿಗೆ 5ನೇ ಸ್ಥಾನ ಪಡೆದಿದೆ.

ಕನ್ನಡದಲ್ಲಿ ಬಿಡುಗಡೆ ಆದರೂ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿ 500 ಕೋಟಿ ಬಾಚಿದ ಕಾಂತಾರಾ ಚಿತ್ರ ಮೊದಲ ದಿನ ಕನ್ನಡದಲ್ಲಿ 3.75 ಕೋಟಿ ಗಳಿಸಿ 7ನೇ ಸ್ಥಾನದಲ್ಲಿದ್ದರೆ, ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ 5 ಕೋಟಿ ರೂ. ಗಳಿಸಿ 5ನೇ ಸ್ಥಾನ ಪಡೆದಿದೆ. ಶಿವರಾಜ್ ಕುಮಾರ್ ಅಭಿನಯದ ವೇದಾ ಚಿತ್ರ 2.75 ಕೋಟಿ ಗಳಿಸಿ 8ನೇ ಸ್ಥಾನದಲ್ಲಿದೆ.

Leave a Comment

Your email address will not be published. Required fields are marked *