ತಂದೆಯ ಸಾವಿನ ಬಳಿಕ ತಾಯಿಗೆ ಮರುಮದುವೆ ಮಾಡಿಸಿದ ಮಗ!!

ಸಮಗ್ರ ನ್ಯೂಸ್: ಸಮಾಜದ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿಗೆ ಮರುಮದುವೆ ಮಾಡಿಸಿದ್ದಾನೆ.

Ad Widget ... ..

ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಕೊಲ್ಹಾಪುರ ಜಿಲ್ಲೆಯ ಯುವರಾಜ್ ಶೆಲೆ ಎಂಬಾತ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ.

Ad Widget

ಈತನ ತಾಯಿ ಪತಿ ಸಾವಿನಿಂದ ತುಂಬಾ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 45 ವರ್ಷ ವಯಸ್ಸಿನ ತಾಯಿಗೆ ಸಂಗಾತಿಯ ಅಗತ್ಯವನ್ನು ಅರಿತ ಯುವರಾಜ್‌ ವರನನ್ನು ಹುಡುಕಿ ತಾನೇ ಮುಂದೆ ನಿಂತು ಮರು ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *