Ad Widget .

ಗುಜರಾತ್ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಹೊಣೆ – ದಿ ಕ್ಯಾರವಾನ್

ಸಮಗ್ರ ನ್ಯೂಸ್: ಗುಜರಾತ್ ನಲ್ಲಿ 2002ರಲ್ಲಿ ಸಂಭವಿಸಿದ್ದ ಗಲಭೆಗಳ ಕುರಿತು ಬ್ರಿಟಿಷ್ ಸರಕಾರವು ನಡೆಸಿದ್ದ ತನಿಖೆಯ ವರದಿಯ ಪ್ರತಿಯು ತನಗೆ ಲಭ್ಯವಾಗಿದ್ದು, ಸಂಪೂರ್ಣ ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎನ್ನುವುದನ್ನು ಅದು ಬೆಟ್ಟು ಮಾಡಿದೆ ಎಂದು ‘The Caravan’ ಬಹಿರಂಗಗೊಳಿಸಿದೆ.

Ad Widget . Ad Widget .

ಇತ್ತೀಚಿನ ಬಿಬಿಸಿಯ (BBC) ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ನಲ್ಲಿ ಈ ವರದಿಯನ್ನು ಉಲ್ಲೇಖಿಸಲಾಗಿದೆ. ಹಿಂದು ರಾಷ್ಟ್ರವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ (VHP) ಈ ಹಿಂಸಾಚಾರವನ್ನು ‘ಯೋಜಿಸಿತ್ತು, ಬಹುಶಃ ತಿಂಗಳುಗಳ ಮೊದಲೇ’ ಎಂದು ಹೇಳಿರುವ ವರದಿಯು, 2002, ಫೆ.27ರ ಗೋಧ್ರಾದಲ್ಲಿ ರೈಲು ಬೋಗಿ ದಹನವು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೆಪವನ್ನೊದಗಿಸಿತ್ತು. ಈ ಘಟನೆ ನಡೆದಿರದಿದ್ದರೂ ಅವರು ಅಂತಹುದೇ ಇನ್ನೊಂದು ನೆಪವನ್ನು ಕಂಡುಕೊಳ್ಳುತ್ತಿದ್ದರು ಎಂದು ಒತ್ತಿ ಹೇಳಿದೆ.

Ad Widget . Ad Widget .

‘ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ನೇರವಾಗಿ ಹೊಣೆಯಾಗಿದ್ದಾರೆ’ ಎಂದು ಹೇಳುವ ಮೂಲಕ ವರದಿಯು ಗುಜರಾತ್ ಸರಕಾರದ ಮೇಲೆ ದೋಷಾರೋಪ ಮಾಡಿದೆ.

ವಿಹಿಂಪ ಮತ್ತು ಅದರ ಮಿತ್ರ ಸಂಘಟನೆಗಳು ರಾಜ್ಯ ಸರಕಾರದ ಬೆಂಬಲದೊಂದಿಗೆ ಕಾರ್ಯಾಚರಿಸಿದ್ದವು. ರಾಜ್ಯ ಸರಕಾರವು ಸೃಷ್ಟಿಸಿದ್ದ ನಿರ್ಭೀತಿಯ ವಾತಾವರಣ ಇಲ್ಲದೇ ಅವರು ಅಷ್ಟೊಂದು ಹಾನಿಯನ್ನುಂಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿ ನರೇಂದ್ರ ಮೋದಿ ನೇರವಾಗಿ ಹೊಣೆಗಾರರಾಗಿದ್ದಾರೆ. ಅವರ ಕ್ರಮಗಳು ಕೇವಲ ರಾಜಕೀಯ ಲಾಭದ ಸಿನಿಕತನದ ಮೌಲ್ಯಮಾಪನದಿಂದ ನಿರ್ದೇಶಿಸಲ್ಪಟ್ಟಿರಲಿಲ್ಲ.

ಬಿಜೆಪಿಯು 1995ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅನುಸರಿಸಿಕೊಂಡು ಬಂದಿರುವ ಹಿಂದು ರಾಷ್ಟ್ರವಾದಿ ಅಜೆಂಡಾದ ಶಿಲ್ಪಿಯಾಗಿ ಮೋದಿ ವಿಹಿಂಪನ ಸೈದ್ಧಾಂತಿಕ ಪ್ರೇರಣೆಯಲ್ಲಿ ನಂಬಿಕೆಯನ್ನು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

Leave a Comment

Your email address will not be published. Required fields are marked *