ಸಮಗ್ರ ನ್ಯೂಸ್: ನೂತನವಾಗಿ ನಿರ್ಮಿಸಲಾದ ಗಾಂಧಿ ಪ್ರತಿಮೆಯೇ ವಿರೂಪಗೊಂಡಿದ್ದರಿಂದ ಇಂದು(ಜ.26) ನಡೆಯಬೇಕಿದ್ದ ಗಾಂಧಿಭವನ ಉದ್ಘಾಟನೆ ಕಾರ್ಯಕ್ರಮ ರದ್ದುಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಲವು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡುತ್ತಿದ್ದು, ಹಾಸನದಲ್ಲಿ ಸುಮಾರು 23 ಲಕ್ಷ ರೂ.ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣಗೊಂಡಿದೆ. ಅಲ್ಲಿ ಗಾಂಧಿ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಆದರೆ ಈ ಪ್ರತಿಮೆ ವಿರೂಪಗೊಂಡಿರುವುದು ವಿವಾದಾತ್ಮಕವಾಗಿ ಪರಿಣಮಿಸಿದ್ದು, ನಾಳೆ ನಡೆಯಬೇಕಿದ್ದ ಉದ್ಘಾಟನೆ ಕಾರ್ಯಕ್ರಮ ರದ್ದುಗೊಂಡಿದೆ.
ಶಿಲ್ಪಕಲೆಯ ತವರು ಎನ್ನಲಾಗಿರುವ ಹಾಸನ ಜಿಲ್ಲೆಯಲ್ಲೇ ಈ ರೀತಿ ಆಗಿರುವ ಕುರಿತು ತೀವ್ರ ಬೇಸರ ವ್ಯಕ್ತವಾಗಿದೆ. ಗಾಂಧಿ ಶಿಲ್ಪಕಲೆಯಲ್ಲೂ ಕಲಾವಿದ ಧರ್ಮ ಬಿಂಬಿಸಲು ಹೊರಟಿದ್ದು, ಗಾಂಧಿ ದಂಡಿಯಾತ್ರೆಯಲ್ಲಿ ಭಾಗಿದಾರರಿಗೂ ಶಿಲುಬೆ ರಚನೆ ಮಾಡಲಾಗಿದೆ.