Ad Widget .

LICಯಲ್ಲಿ‌‌ 9394 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಸಂಪೂರ್ಣ ಮಾಹಿತಿ ಇಲ್ಲಿದೆ

ಸಮಗ್ರ ನ್ಯೂಸ್: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುವ ಎಲ್‌ಐಸಿ, ಇಂದಿನಿಂದ ಅರ್ಜಿ ಸ್ವೀಕಾರ ಶುರುಮಾಡಿದೆ. ಒಟ್ಟು 9394 ಹುದ್ದೆಗಳ ಭರ್ತಿಗೆ ಎಲ್‌ಐಸಿ ಈ ನೇಮಕ ಅಭಿಯಾನ ಕೈಗೊಂಡಿದೆ.

Ad Widget . Ad Widget .

ಅರ್ಜಿ ಸಲ್ಲಿಕೆ ಶುರು – 21 ಜನವರಿ 2023.
ಅರ್ಜಿ ಸಲ್ಲಿಕೆಗೆ ಕೊನೇ ದಿನ – 10 ಫೆಬ್ರವರಿ 2023.
ಕಾಲ್‌ ಲೆಟರ್‌ ಡೌನ್‌ಲೋಡ್‌ – 4 ಮಾರ್ಚ್‌ 2023.
ಪ್ರಿಲಿಮಿನರಿ ಎಕ್ಸಾಂ ದಿನಾಂಕ – 12 ಮಾರ್ಚ್‌ 2023.
ಮೇನ್‌ ಎಕ್ಸಾಂ ದಿನಾಂಕ – 8 ಏಪ್ರಿಲ್‌ 2023.

Ad Widget . Ad Widget .

ಖಾಲಿ ಹುದ್ದೆ ಎಲ್ಲಿ ಎಷ್ಟು -ವಿವರ:
ದಕ್ಷಿಣ ವಲಯ ಕಚೇರಿ – 1516 ಹುದ್ದೆ.
ಸೌತ್‌ ಸೆಂಟ್ರಲ್‌ ವಲಯ ಕಚೇರಿ – 1408 ಹುದ್ದೆ.
ಉತ್ತರ ವಲಯ ಕಚೇರಿ – 1216 ಹುದ್ದೆ.
ನಾರ್ತ್‌ ಸೆಂಟ್ರಲ್‌ ವಲಯ ಕಚೇರಿ – 1033 ಹುದ್ದೆ.
ಪೂರ್ವ ವಲಯ ಕಚೇರಿ – 1049 ಹುದ್ದೆ.
ಈಸ್ಟ್‌ ಸೆಂಟ್ರಲ್‌ ವಲಯ ಕಚೇರಿ – 669 ಹುದ್ದೆ.
ಸೆಂಟ್ರಲ್‌ ವಲಯ ಕಚೇರಿ – 561 ಹುದ್ದೆ.
ಪಶ್ಚಿಮ ವಲಯ ಕಚೇರಿ – 1942 ಹುದ್ದೆ.

ಅರ್ಹತಾ ಮಾನದಂಡಗಳೇನು?
ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸುವುದಕ್ಕಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು licIndia ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಗಳ ವಯೋಮಿತಿಯು 21 ವರ್ಷದಿಂದ 30 ವರ್ಷ ವಯಸ್ಸಿನೊಳಗೇ ಇರಬೇಕು.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ:
ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ. ಆಯ್ಕೆಯನ್ನು ಆನ್‌ಲೈನ್‌ ಟೆಸ್ಟ್‌ ಮತ್ತು ಅದರಲ್ಲಿ ಉತ್ತೀರ್ಣರಾದ ಅರ್ಹರ ಸಂದರ್ಶನ ನಡೆಯಲಿದೆ. ಅದೇ ರೀತಿ ನೇಮಕಾತಿ ಪೂರ್ವದ ಮೆಡಿಕಲ್‌ ಎಕ್ಸಾಮಿನೇಷನ್‌ನಲ್ಲೂ ಉತ್ತೀರ್ಣರಾಗಬೇಕು.

ಅರ್ಜಿ ಶುಲ್ಕ ವಿವರ ಹೀಗಿದೆ:
ಎಲ್‌ಐಸಿಯಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳ ಹೊರತಾದವರು 750 ರೂಪಾಯಿ ಪಾವತಿಸಬೇಕು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಾದರೆ 100 ರೂಪಾಯಿ ಶುಲ್ಕ ಪಾವತಿಸಬೇಕು. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಟ್‌, ಯುಪಿಐ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಐಎಂಪಿಎಸ್‌, ಕ್ಯಾಶ್‌ ಕಾರ್ಡ್‌/ ಮೊಬೈಲ್‌ ವ್ಯಾಲೆಟ್‌ ಬಳಸಿಕೊಂಡು ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ licindia.in ಗೆ ಭೇಟಿ ನೀಡಿ.

Leave a Comment

Your email address will not be published. Required fields are marked *