Ad Widget .

ಕಾವೂರು: 3.56 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭರತ್ ಶೆಟ್ಟಿಯಿಂದ ಗುದ್ದಲಿಪೂಜೆ!

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು 18ನೇ ವಾರ್ಡ್ ನಲ್ಲಿ 3.56 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಗುದ್ದಲಿಪೂಜೆ ನೆರವೇರಿಸಿದರು.

Ad Widget . Ad Widget .

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೋದರ್ ಶಾಲೆ, ಮಾಲಾಡಿ ಮಂಜಲ್ ಕಟ್ಟೆ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಬಳಿಕ ಮಾತಾಡಿದ ಶಾಸಕ ಭರತ್ ಶೆಟ್ಟಿ ಅವರು, “ಈ ಭಾಗದ ಜನರಿಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಹಲವು ವರ್ಷಗಳ ಕನಸಾಗಿತ್ತು. ಎರಡು ವರ್ಷ ಕೋವಿಡ್ ಸಂಕಷ್ಟವನ್ನು ಎದುರಿಸಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ, ಚರಂಡಿ, ಪಾರ್ಕ್ ನಿರ್ಮಾಣ ಮುಖ್ಯ ಆದ್ಯತೆಯಾಗಿದ್ದು ಅದನ್ನು ಒದಗಿಸಲು ಪಣತೊಟ್ಟಿದ್ದೇವೆ. ಮುಂದಿನ ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳ್ಳಲಿದ್ದು ಅಲ್ಲಿಯವರೆಗೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ” ಎಂದರು.

Ad Widget . Ad Widget .

ಕಾರ್ಪೋರೇಟರ್ ಗಳಾದ ಕಿರಣ್ ಕೋಡಿಕಲ್, ಗಾಯತ್ರಿ ಎ. ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *