Ad Widget .

“ಬೆಂಕಿ ಆಕಸ್ಮಿಕಕ್ಕೆ ಮನೆ ಕಳೆದುಕೊಂಡವರಿಗೆ ಶೀಘ್ರವೇ ಮನೆ ನಿರ್ಮಾಣ”-ಭರತ್ ಶೆಟ್ಟಿ

ಸುರತ್ಕಲ್: ಕಳೆದ ವಾರ ಸುರತ್ಕಲ್ ಬಳಿಯ ಬಾಂಗ್ಲಾ ಕಾಲನಿಯಲ್ಲಿ ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡಿರುವ ಉಮೇಶ್ ಆಚಾರ್ಯ ಹಾಗೂ ಕಾವೂರು ಪಳನೀರು ನಿವಾಸಿ ಇಂದಿರಾ ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಾಣಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ. ಹೇಳಿದರು.

Ad Widget . Ad Widget .

ಮಾಧ್ಯಮಗಳ ಜೊತೆ ಮಾತಾಡಿದ ಅವರು, “ಬೇಸಿಗೆಯಲ್ಲಿ ಬೆಂಕಿ ಅನಾಹುತದ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು. ಬೆಂಕಿ ಅನಾಹುತಕ್ಕೆ ಮನೆಗಳನ್ನು ಕಳೆದುಕೊಂಡಿರುವ ಎರಡೂ ಕುಟುಂಬಗಳಿಗೆ ಕೂಡಲೇ ಹೊಸ ಮನೆ ಕಟ್ಟಿಕೊಡುವ ಬಗ್ಗೆ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಆದಷ್ಟು ಶೀಘ್ರವಾಗಿ ಹೊಸ ಮನೆ ನಿರ್ಮಾಣಕಾರ್ಯ ಆರಂಭಿಸಲಾಗುವುದು.

Ad Widget . Ad Widget .

ಅಲ್ಲಿಯವರೆಗೆ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಿರುವ ವ್ಯವಸ್ಥೆ, ರೇಷನ್ ಹಾಗೂ ಬಾಡಿಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ” ಎಂದರು.

Leave a Comment

Your email address will not be published. Required fields are marked *