Ad Widget .

ಗಾಯಕಿ ಕಾರಿನ ಮೇಲೆ ಕಲ್ಲು ತೂರಾಟ|ಸ್ಪಷ್ಟನೇ ನೀಡಿದ ಮಂಗ್ಲಿ

ಸಮಗ್ರ ನ್ಯೂಸ್ : ಜ.22 ರಂದು ಬಳ್ಳಾರಿಯಲ್ಲಿ ನಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ವೇಳೆ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಕಿಡಿಗೇಡಿಗಳು ಮಂಗ್ಲಿಗೆ ಮುತ್ತಿಗೆ ಹಾಕಿ, ಕಲ್ಲು ತೂರಾಟ ಮಾಡಿದರು ಎಂದು ಹೇಳಲಾಗಿತ್ತು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದರು ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತು ಸ್ವತಃ ಮಂಗ್ಲಿ ಸ್ಪಷ್ಟನೇ ನೀಡಿದ್ದಾರೆ.

Ad Widget . Ad Widget .

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ನನ್ನ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ಅದೊಂದು ಗಾಳಿಸುದ್ದಿ. ಆ ರೀತಿಯ ಘಟನೆ ಆಗಿಲ್ಲ. ನನ್ನ ಇಮೇಜ್ ಹಾಳು ಮಾಡಲು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪೊಲೀಸ್ ಇಲಾಖೆ ನನ್ನನ್ನು ಗೌರವಯುತವಾಗಿ ನೋಡಿಕೊಂಡಿದೆ. ಲಾಠಿಚಾರ್ಜ್ ಕೂಡ ಆಗಿಲ್ಲ. ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ’ ಎಂದು ಅವರು ಹೇಳಿದ್ದಾರೆ.

Ad Widget . Ad Widget .

ಕಾರಿನ ಗಾಜು ಒಡೆದಿರುವುದಕ್ಕೆ ಬಳ್ಳಾರಿ ಎಸ್ಪಿ ರಂಜಿತಕುಮಾರ್ ಬಂಡಾರ (Ranjith Kumar Bandara) ಸ್ಪಷ್ಟನೆ ನೀಡಿದ್ದು, ‘ಕಾರಿನ ಮೇಲೆ ಯಾವುದೋ ಒಂದು ವಸ್ತು ಬಿದ್ದಿರುವ ಕಾರಣಕ್ಕಾಗಿ ಗಾಜು ಒಡೆದಿದೆ. ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎನ್ನುವುದು ಸುಳ್ಳು. ಆ ರೀತಿಯ ಘಟನೆ ಆಗಿಲ್ಲ. ಪೊಲೀಸರು ಮತ್ತು ಅಭಿಮಾನಿಗಳ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ’ ಎಂದಿದ್ದಾರೆ.

Leave a Comment

Your email address will not be published. Required fields are marked *