ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿ ಎಂದು ಹೇಳಿಕೊಂಡು 23 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಂಚತಾರಾ ಹೋಟೆಲ್​ಗೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಷರೀಫ್ (41) ಬಂಧಿತ ವ್ಯಕ್ತಿ.

Ad Widget ... ..

ಬಂಧಿತ ಮಹಮ್ಮದ್ ಷರೀಫ್ ಕರ್ನಾಟಕದ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಕಲಿ ವ್ಯಾಪಾರ ಕಾರ್ಡ್​​​ನ್ನು ಬಳಸಿಕೊಂಡು ಸುಮಾರು ಮೂರು ತಿಂಗಳ ಕಾಲ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

ಮಹಮ್ಮದ್ ಷರೀಫ್ ಮೂರು ತಿಂಗಳ ಹೋಟೆಲ್ ವಾಸ್ತವ್ಯದಲ್ಲಿ ಬರೋಬ್ಬರಿ 23,46,413 ರೂ. ಬಿಲ್ ಮಾಡಿದ್ದ. ಈತ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿ ಎಂದು ಬಿಂಬಿಸಿದ್ದರಿಂದ ಹೋಟೆಲ್ ಸಿಬ್ಬಂದಿಯೂ ಮೋಸ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಷರೀಫ್ ಲೀಲಾ ಪ್ಯಾಲೇಸ್​ನಿಂದ ಎಸ್ಕೇಪ್ ಆಗಿದ್ದ.

ಈ ಬಗ್ಗೆ ಹೋಟೆಲ್ ಪ್ರಧಾನ ವ್ಯವಸ್ಥಾಪಕ ಅನುಪಮ್ ದಾಸ್ ಗುಪ್ತಾ ವಂಚನೆಯ ಬಗ್ಗೆ ಕಳೆದ ಜನವರು 14ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. 419/420/380 ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಸದ್ಯ ಆರೋಪಿ ಷರೀಫ್​ನನ್ನು ಜ.19 ರಂದು ದಕ್ಷಿಣಕನ್ನಡದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ಮಹಮದ್ ಷರೀಫ್ ಕಳೆದ ಆಗಸ್ಟ್ 1 ರಿಂದ ನವೆಂಬರ್ 20ರ ವರೆಗೆ ಲೀಲಾ ಪ್ಯಾಲೇಸ್‌ನಲ್ಲಿ ತಂಗಿದ್ದ. ಅಲ್ಲಿ ತನ್ನ ವಾಸ್ತವ್ಯದ ಬಿಲ್ ಪಾವತಿಸದೆ, ಹೋಟೆಲ್​ನಲ್ಲಿದ್ದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರೆಸಿಡೆಂಟ್ ಕಾರ್ಡ್​ ನೀಡಿದ್ದ. ಹೋಟೆಲ್​ನಿಂದ ಹೊರಹೋಗುವಾಗ ಆರೋಪಿ 20 ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದ. ಆದರೆ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *