ಸಮಗ್ರ ನ್ಯೂಸ್: ದ. ಕ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದ ಹಲವೆಡೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ಸಾಂಕ್ರಾಮಿಕ ರೋಗವು ಹರಡುತ್ತಲೇ ಇದೆ. ಈ ಜಾನುವಾರುಗಳಿಗೆ ಬಂದ ಕಾಯಿಲೆಯು ಅದನ್ನೇ ಅವಲಂಬಿತವಾಗಿರುವ ಜನರ ನಿದ್ದೆ ಕೆಡಿಸಿದೆ.
ಇದು ಜಾನುವಾರುಗಳಿಗೆ ಬರುವ ಕಾಯಿಲೆಯಾಗಿದೆ. ಇದರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ದೃಢೀಕರಣ ಪಡಿಸಿದೆ .
ಚರ್ಮಗಂಟು ರೋಗ ಲಕ್ಷಣಗಳೇನು –
- ಬಾಯಿ ಮೂಗಿನಿಂದ ಲೊಳೆಯಂತಹ ದ್ರವ, ಜ್ವರ ಹಾಗೂ ಜ್ವರಕ್ಕೆ ಸಂಬಂಧಿತವಾದ ಗಂಟು ನೋವು , ಶೀತ ದಿನನಿತ್ಯದ ಚಟುವಟಿಕೆಯಾದ ಮಲ ,ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಮತ್ತು ಆಹಾರ ಸೇವನೆ ಕಡಿಮೆಯಾಗುತ್ತದೆ.
ಕೆಲವೊಮ್ಮೆ ಕರುಗಳಲ್ಲಿ ಮಲವು ನೀರಿನಂತಾಗಿ (Diarrhoea) ಇರುತ್ತದೆ. ಜ್ವರ ಇರುವ ಸಂದರ್ಭದಲ್ಲಿ ರಾತ್ರಿಯಿಡೀ ಮಲಗದೆ ನಿಂತಿರುವ ಉದಾಹರಣೆಯೂ ಇದೆ .
ರೋಗ ಪೀಡಿತ ಹಸುಗಳಲ್ಲಿ ಹಾಲು ನೀಡುವಿಕೆ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ. ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು, ಗಂಟುಗಳು ಎದ್ದು ಒಡೆಯುವುದು. ಇದರಿಂದ ಶೇ.2ರಷ್ಟು ಪ್ರಮಾಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜಾನುವಾರುಗಳು ಮರಣ ಹೊಂದಲೂಬಹುದು.
ಒಂದು ಮುಖ್ಯವಾದ ವಿಷಯ ಏನೆಂದರೆ ಹೇಗೆ ಕೊರೋನದ ಸಮಯದಲ್ಲಿ ಇಮ್ಯುನಿಟಿ(ರೋಗನಿರೋಧಕ) ಹೆಚ್ಚಿಸುವಲ್ಲಿ ಹೋಮಿಯೋಪಥಿ ಯಶಸ್ವಿಯಾಯಿತು ಹಾಗೆಯೇ ಹೋಮಿಯೋಪಥಿ ಈಗ ದನದ ಇಮ್ಯುನಿಟಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ .
ರೋಗದ ಕುರಿತು ರೈತರು ಕೆಲವು ವಿಷಯ ಅರಿತಿರಬೇಕು. ರೋಗ ಇರುವ ದನಗಳಿಂದ ಉಳಿದ ದನಗಳನ್ನು ಬೇರ್ಪಡಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು.
ಸೋಂಕು ನಿವಾರಣಾ ಚಿಕಿತ್ಸೆ ಹೇಗೆ:-
ಹೋಮಿಯೋಪಥಿಯಲ್ಲಿ ಹೆಚ್ಚಾಗಿ ರೋಗಬಂದ 15-30ದಿನದ ಒಳಗಡೆ ಸಂಪೂರ್ಣ ಗುಣ ಮುಖ ಆಗುತ್ತದೆ.
ಇದುವರೆಗೆ ಹಲವಾರು ದನಕರುಗಳು ಹೋಮಿಯೋಪಥಿ ಮದ್ದಿನಿಂದ ಗುಣಮುಖವಾಗಿದ್ದು ಅದರೊಡನೆ ರೋಗ ಹರಡದ ರೀತಿಯಲ್ಲಿ ಇಮ್ಯುನಿಟಿ ಹೆಚ್ಚಿಸಲು ಸಹಕಾರಿಯಾಗಿದೆ. ಹೆಚ್ಚಿನ ದನಕರುಗಳು ಚಿಕಿತ್ಸೆಗೆ ಸ್ಪಂದಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಡಾ. ಆದಿತ್ಯ ಭಟ್ ಚಣಿಲ
ಶ್ರೀ ಹೋಮಿಯೋಕೇರ್, ಕುಕ್ಕೆ ಸುಬ್ರಹ್ಮಣ್ಯ- 8861210292