Ad Widget .

ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಗುಡುಗಿದ ಭರತ್ ಶೆಟ್ಟಿ!

ಸಮಗ್ರ ನ್ಯೂಸ್: ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.

Ad Widget . Ad Widget .

“ಗೋಹತ್ಯೆಯನ್ನು ಹಿಂದೆಯೂ ನಿಲ್ಲಿಸಿದ್ದೇವೆ, ಮುಂದೆಯೂ ನಿಲ್ಲಿಸುತ್ತೇವೆ. ಹಿಂದೆ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಯುವಕ ಪೊಲೀಸ್ ಗುಂಡೇಟಿಗೆ ಬಲಿಯಾದಾಗ ಆತನಿಗೆ 10 ಲಕ್ಷ ಕೊಟ್ಟಿದ್ದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಈಗ ಹಿಂದೂಗಳ ಮನೆಗೆ ಹೋಗಿ ಸಾಂತ್ವನ ನೀಡುತ್ತಿದ್ದಾರೆ. ಸುರತ್ಕಲ್ ನಲ್ಲಿ ನಡೆದ ಬೈಕ್ ರ್ಯಾಲಿಗೆ ಬರಲು ಉಚಿತ ಪೆಟ್ರೋಲ್ ಹಾಕಲು ಚೀಟಿಯೊಂದನ್ನು ಜೋಕಟ್ಟೆಯ ಹುಡುಗರಿಗೆ ನೀಡಿದ್ದರು. ಅವರ ಭವಿಷ್ಯದಲ್ಲೇ ಬೌನ್ಸ್ ಆಗದೇ ಇರುವುದು ಈ ಚೀಟಿ ಮಾತ್ರ. ಉಚಿತ ಪೆಟ್ರೋಲ್ ನಿಂದ ನೂರಿನ್ನೂರು ಬೈಕ್ ಗಳು ಬಂದಿತ್ತು.

Ad Widget . Ad Widget .

ನೀವು ಪೆಟ್ರೋಲ್ ಹಾಕಿಸ್ಕೊಳ್ಳಿ, ರ್ಯಾಲಿ ಮಾಡಿ ಏನ್ ಬೇಕಾದ್ರು ಮಾಡಿ ಆದ್ರೆ ಅದೇ ಉಚಿತ ಪೆಟ್ರೋಲ್ ಇದೆ ಅಂತ ಬೇಕಾಬಿಟ್ಟಿ ತಿರುಗಾಡಿ ನಮ್ಮ ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್ ಮಾಡ್ತೇವೆ ಅಂತ ಅನ್ಕೊಂಡ್ರೆ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲೇ ಕಳಿಸ್ತೇನೆ” ಎಂದು ಭರತ್ ಶೆಟ್ಟಿ ಹೇಳಿದ್ದಾರೆ.

“ನನ್ನನ್ನು ಕೋಮುವಾದಿ ಎಂದು ಕರೆಯುತ್ತಾರೆ, ನಾನು ಶಾಸಕನಾಗಿ ಹಿಂದೂಗಳು ಮಾತ್ರವಲ್ಲ ಕ್ರೈಸ್ತ, ಮುಸ್ಲಿಂ ಎಲ್ಲರ ಕೆಲಸವನ್ನು ಮಾಡಿಕೊಡುತ್ತೇನೆ. ನಿಮ್ಮಷ್ಟಕ್ಕೆ ನೀವಿದ್ದರೆ ನಿಮ್ಮ ಜೊತೆ ನಾನಿದ್ದೇನೆ. ನನ್ನ ಸಮಾಜಕ್ಕೆ ಅನ್ಯಾಯವಾದ್ರೆ ಕೈಕಟ್ಟಿ ಕೂರುವುದಿಲ್ಲ. ನನಗೆ ರಾಷ್ಟ್ರಭಕ್ತರ ವೋಟ್ ಸಾಕು, ದೇಶದ್ರೋಹಿಗಳ ವೋಟ್ ಬೇಡ, ದೇಶದ ಬಗ್ಗೆ ಪ್ರೀತಿ, ಕಾಳಜಿ ಇರುವವರು ನನಗೆ ವೋಟ್ ಮಾಡಿದ್ರೆ ಸಾಕು, ದೇಶಕ್ಕೆ ದ್ರೋಹ ಎಸಗುವವರು ವೋಟ್ ಹಾಕುವುದು ಬೇಡ” ಎಂದರು.

Leave a Comment

Your email address will not be published. Required fields are marked *