Ad Widget .

ಕುಲಗೆಟ್ಟ ಆರ್ಥಿಕತೆಗೆ ಪಾಕ್ ಸ್ಥಿತಿ ಅಧೋಗತಿ| ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ!?

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದ್ದು, ಅರಾಜಕತೆ ಮುಂದುವರೆದಿದೆ. ಜನ ಹಸಿವಿನಿಂದ ಸಂಕಷ್ಟದಲ್ಲಿದ್ದು, ಜನರು ಸರ್ಕಾರದ ವಿರುದ್ದ ದಂಗೆ ಎದ್ದಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪರಿಸ್ಥಿತಿ ತೀರಾ ವಿಷಮಸ್ಥಿತಿ ತಲುಪಿದ್ದು, ಇದರ ಕಾವು ಪ್ರತಿಭಟನೆಯ ರೂಪದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹಾಳಾಗಿದೆ ಅಂದರೆ ಖುದ್ದು ಅಲ್ಲಿನ ಜನ ತಮ್ಮನ್ನ ಭಾರತಕ್ಕೆ ಸೇರಿಸಿ ಅಂತ ಆಗ್ರಹ ಮಾಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Ad Widget . Ad Widget . Ad Widget .

ಪಿಒಕೆ ಜನ ಪಾಕ್‌ ಸರ್ಕಾರ ವಿರುದ್ದ ಕಳೆದ ಒಂದು ವಾರದಿಂದ ಪ್ರತಿಭಟನೆ ಮಾಡ್ತಿದಾರೆ. ಇದೇ ವೇಳೆ POKಯನ್ನ ಭಾರತದೊಂದಿಗೆ ವಿಲೀನಗೊಳಿಸಬೇಕು ಎಂಬ ಕೂಗುಗಳು ಕೇಳಿಬರ್ತಿವೆ. ಈ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇನ್ನು POKಯನ್ನ ಪಾಕ್‌ 1948ರಿಂದ ತನ್ನ ಹಿಡಿತದಲ್ಲಿ ಹಿಡಿದುಕೊಂಡಿದೆ. ಅವರು ನಮಗೆ ಏನೂ ಕೊಟ್ಟಿಲ್ಲ. ಈ ಪ್ರದೇಶದಲ್ಲಿನ ಜನರನ್ನ ಬಹಿಷ್ಕಾರ ಮಾಡಿದ್ದಾರೆ. ನಮಗೆ ನಿರುದ್ಯೋಗ ಕೊಟ್ಟಿದ್ದಾರೆ. ಇಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಕೂಡ ಇಲ್ಲ ಅಂತ ಗಡಿಪಾರು ಆಗಿರುವ POKಯ ನಾಯಕ ಶೌಕತ್‌ ಅಲಿ ಕಾಶ್ಮೀರಿ ಹೇಳಿದ್ದಾರೆ.

ಭಾರತಕ್ಕೆ ಸೇರಬೇಕು ಅನ್ನುತ್ತಿರುವ ಇನ್ನೂ ಕೆಲವರು POK ಗಡಿಯಲ್ಲಿ ಭಾರತದ ಮುಂದೆ ಸರೆಂಡರ್‌ ಆಗೋದನ್ನು ಬಿಟ್ಟರೆ ಬೇರೆ ಗತಿ ಇಲ್ಲ ಎನ್ನುತ್ತಿದ್ದಾರೆ. ಜೊತೆಗೆ ಗಿಲ್ಗಿಟ್ ಬಾಲ್ಟಿಸ್ತಾನ್‌, ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಹಾಗೂ ಭಾರತದ ಜೊತೆಗಿನ ಸಂಬಂಧಗಳನ್ನು ಸರಿಮಾಡಿ ಅಂತ ಹೇಳುತ್ತಿದ್ದಾರೆ. ಇದು ಈಗ ಪಾಕ್‌ನ ಸೇನೆಗೆ ಹಾಗೂ ಪಾಕ್‌ನ ಸರ್ಕಾರಕ್ಕೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಯಾಕಂದರೆ ಈ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಜನರಿಗೆ ಪಾಕಿಸ್ತಾನದಲ್ಲಿ ಯಾವುದೇ ಸರಿಯಾದ ಗೌರವ, ಮಾನ್ಯತೆಗಳು ಕೂಡ ಇಲ್ಲ. ಅವರನ್ನ ಮೂರನೇ ದರ್ಜೆಯ ಪ್ರಜೆಗಳಾಗಿ ಕಾಣಲಾಗುತ್ತಿದೆ. ಅಲ್ಲಿನ ಸಂಪನ್ಮೂಲಗಳನ್ನು ಚೀನಾ ಜೊತೆಗೆ ಸೇರಿ ಪಾಕ್‌ ಕೊಳ್ಳೆ ಹೊಡೆಯುತ್ತಿದೆ ಎಂಬ ಅಸಮಾಧಾನ ಪಿಒಕೆ ಜನರಿಗೆ ಇದೆ. ಅಷ್ಟೇ ಅಲ್ಲ ಈ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಜನರಿಗೆ ಪಾಕ್‌ನ ಸೆಂಟ್ರಲ್‌ ಗೌರ್ನಮೆಂಟ್‌ನಲ್ಲಿ ರಾಜಕೀಯ ಅಧಿಕಾರ ಕೂಡ ಇಲ್ಲ. ಅಂದ್ರೆ ಹೆಚ್ಚು ಕಡಿಮೆ ಪೂರ್ವ ಪಾಕಿಸ್ತಾನದ ತರ‌ ಇದೆ.

ಬಾಂಗ್ಲಾ ದೇಶದವರು ಮುಂಚೆ ಪಾಕಿಸ್ತಾನದ ಭಾಗವಾಗಿದ್ದಾಗ ಹೇಗೆ ರಾಜಕೀಯದಲ್ಲಿ ವಂಚನೆ ಮಾಡಿ ಬರೀ ವಸಾಹತು ತರ ಮಾಡುತ್ತಿದ್ದರೋ ಅದೇ ರೀತಿ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಜನರನ್ನ ಸಹ ಪಾಕ್‌, ವಸಾಹತುನಂತೆ ಟ್ರೀಟ್‌ ಮಾಡುತ್ತಿದೆ. ಹೀಗಾಗಿ ಪಾಕ್‌ನಿಂದ ನಮಗೆ ಸ್ವಾತಂತ್ರ ಬೇಕು ನಾವು ಭಾರತಕ್ಕೆ ಸೇರಬೇಕು ಅಂತ ಅಲ್ಲಿ ದೊಡ್ಡ ಆಂದೋಲನ ಶುರುವಾಗಿದೆ.

ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಹತ್ವದ ಹೇಳಿಕೆ ನೀಡಿದ್ದಾರೆ. POK ಆಗಲೀ ಅಥವಾ ಪಾಕಿಸ್ತಾನ್‌ ಆಗಲೀ ಯಾರು ಸಮಸ್ಯೆಯಲ್ಲಿ ಇರಬಾರದು. ಎಲ್ಲರೂ ಸಂತೋಷದಿಂದ ಇರಬೇಕು ಅಂತ ನಾವು ಬಯಸುತ್ತೇವೆ. ಕೇವಲ ಭಾರತದ ಗಡಿಯೊಳಗೆ ಇರೋದು ಮಾತ್ರ ಕುಟುಂಬ ಅಂತ ಪರಿಗಣಿಸದೇ, ವಿಶ್ವಾದ್ಯಂತ ಇರುವ ಜನರನ್ನ ಕುಟುಂಬ ಅಂತ ಭಾರತ ತಿಳಿದುಕೊಳ್ಳುತ್ತೆ. ವಸುದೈವ ಕುಟುಂಬಕಂ ಸಂದೇಶವನ್ನು ಕೊಡುವ ದೇಶ ಭಾರತವಾಗಿದೆ ಅಂತ ಹೇಳಿದ್ದಾರೆ.

Leave a Comment

Your email address will not be published. Required fields are marked *