Ad Widget .

ಜನಸಾಮಾನ್ಯರಿಗೆ ಶಾಸಕ ಭರತ್ ಶೆಟ್ಟಿ ಥ್ರೆಟ್! -ಮೊಯಿದೀನ್ ಬಾವಾ ವಾಗ್ದಾಳಿ

ಸಮಗ್ರ ನ್ಯೂಸ್: “ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಬಹಿರಂಗ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಲವ್ ಜಿಹಾದ್ ಮಾಡಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದೀರಿ ಭರತ್ ಶೆಟ್ಟಿ ಆವರೇ, ಹಾಗಾದರೆ ರ್ಯಾಲಿಯಲ್ಲಿದ್ದ ಕಾಂಗ್ರೆಸ್ ಮುಖಂಡರು, ಸಾವಿರಾರು ಸಂಖ್ಯೆಯ ಹಿಂದೂ ಮುಸ್ಲಿಂ ಕ್ರೈಸ್ತ ಕಾರ್ಯಕರ್ತರು ಲವ್ ಜಿಹಾದ್ ಮಾಡುತ್ತಾರಾ? ಇದಕ್ಕೆ ಉತ್ತರಿಸಿ” ಎಂದು ವಾಗ್ದಾಳಿ ನಡೆಸಿದರು.

Ad Widget . Ad Widget .

“ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಭರತ್ ಶೆಟ್ಟಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಸುರತ್ಕಲ್ ನಲ್ಲಿ ಮನೆ ಸುಟ್ಟುಹೋದ ಪ್ರಕರಣದಲ್ಲಿ ಮಾನವೀಯ ನೆಲೆಯಲ್ಲಿ ನಾನು ಹೋಗಿ 25 ಸಾವಿರ ನೀಡಿದ್ದೆ, ಮೊನ್ನೆ ರಸ್ತೆ ಗುಂಡಿಗೆ ಬಲಿಯಾದ ಆತೀಶ್ ಕುಟುಂಬಕ್ಕೆ ಒಂದು ಲಕ್ಷ ರೂ., ಕೊಲೆಗೀಡಾದ ಜಲೀಲ್ ಕುತುಂಬಕ್ಕೆ ಒಂದು ಲಕ್ಷ ರೂ., ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ್ ಪೂಜಾರಿಗೆ 1 ಲಕ್ಷ ರೂ. ಕೊಟ್ಟಿದ್ದೇನೆ. ಮಾನ್ಯ ಶಾಸಕರು ಕೇವಲ ಫೋಟೋ ತೆಗೆಯಲು ಹೋಗಿ ಬರುತ್ತಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ? ಅವರ ಈ ಕೀಳುಮಟ್ಟದ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು” ಎಂದು ಬಾವಾ ಹೇಳಿದರು.

Ad Widget . Ad Widget .

ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *