Ad Widget .

“ಗಣರಾಜ್ಯೋತ್ಸವ ಬಿಟ್ಬಿಡಿ; ಕ್ರಾಂತಿ ಉತ್ಸವ ಆಚರಿಸಿ”| ವಿವಾದಾತ್ಮಕ ಹೇಳಿಕೆ ನೀಡಿದ ರಚಿತಾ ರಾಮ್ ಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ್‌ ಹಾಗೂ ರಚಿತಾ ರಾಮ್‌ ಅಭಿನಯದ ಬಹುನಿರೀಕ್ಷಿತ ‘ಕ್ರಾಂತಿ’ ಸಿನಿಮಾದ ಪ್ರಮೋಷನ್ ವೇಳೆ ನಾಯಕಿ ನಟಿ ರಚಿತಾ ರಾಮ್ ನೀಡಿದ್ದ ಹೇಳಿಕೆ ಇದೀಗ ವಿವಾದ ಶುರುಮಾಡಿದೆ. ಡಿಂಪಲ್ ಕ್ವೀನ್ ವಿರುದ್ದ ದೂರು ದಾಖಲಿಸಲಾಗಿದ್ದು, ಬಂಧನ ಭೀತಿ ಎದುರಾಗಿದೆ.

Ad Widget . Ad Widget .

ನಟ ದರ್ಶನ್‌ ಅಭಿನಯದ ಈ ಸಿನಿಮಾವನ್ನು ಬರೋಬ್ಬರಿ 22 ತಿಂಗಳುಗಳ ಬಳಿಕ ಬೆಳ್ಳತೆರೆ ಮೇಲೆ ನೋಡಿ ಸಂಭ್ರಮಿಸಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಿನಿಮಾ ಮುಂದಿನ ವಾರ ಗುರುವಾರ(ಜ.26)ದಂದು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬರಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ನಾಯಕಿ ರಚಿತಾ ರಾಮ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget . Ad Widget .

ನಟಿ ರಚಿತಾ ರಾಮ್‌ ಅವರು ನೀಡಿರುವ ಹೇಳಿಕೆಯೊಂದು ತೀವ್ರ ವಿವಾದ ಸೃಷ್ಟಿಸಿದೆ. ಕಳೆದ ವಾರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ನಟಿ ಗಣರಾಜ್ಯೋತ್ಸವದ ಬಗ್ಗೆ ವಿವಾದಿತ ಮಾತೊಂದನ್ನು ಆಡಿದ್ದರು. “ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ ಈ ವರ್ಷ ಗಣರಾಜ್ಯೋತ್ಸವ ಮರೆತುಬಿಡಿ. ಕ್ರಾಂತಿಯ ಉತ್ಸವ ಆಚರಿಸಿ ಅಷ್ಟೇ ” ಎಂದು ನಟಿ ರಚಿತಾ ರಾಮ್‌ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ರಚಿತಾ ರಾಮ್‌ ವಿರುದ್ಧ ಹರಿಹಾಯ್ದಿದ್ದಾರೆ. ಟ್ರೋಲ್‌ ಸಹ ಮಾಡಿದ್ದಾರೆ.

ದೇಶಕ್ಕಿಂತ ನಿಮ್ಮ ಸಿನಿಮಾ ದೊಡ್ಡದಲ್ಲ. ಅನಕ್ಷರಸ್ತೆ ತರ ಮಾತನಾಡಿ, ಗೌರವ ಕಳೆದುಕೊಳ್ಳಬೇಡಿ ಎಂದಿದ್ದರು. ನಿಮಗೆ ಈ ದೇಶದ ಮೇಲೆ ಗೌರವ ಇಲ್ಲದಿದ್ದರೆ, ಪಾಕಿಸ್ತಾನಕ್ಕೆ ಹೋಗಿ ಎಂದು ನಟಿ ರಚಿತಾ ರಾಮ್‌ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ರಚಿತಾರಾಮ್‌ ವಿರುದ್ಧ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ದೂರು ನೀಡಲಾಗಿದೆ. ನಟಿ ರಚಿತಾ ರಾಮ್‌ ಭಾರತ ಸಂವಿಧಾನಕ್ಕೆ ಹಾಘೂ ಗಣರಾಜ್ಯೋತ್ಸವಕ್ಕೆ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಒತ್ತಾಯ ಮಾಡಿದ್ದಾರೆ.

Leave a Comment

Your email address will not be published. Required fields are marked *