Ad Widget .

ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಜ್ಯುವೆಲ್ಲರಿ ಅಂಗಡಿಯ ಮಾಲೀಕ

ಸೂರತ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

Ad Widget . Ad Widget .

“ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗುಜರಾತ್‌ನ 182 ಸ್ಥಾನಗಳ ಪೈಕಿ 156ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ 156 ಗ್ರಾಂ ತೂಕದ ಅವರ ಪ್ರತಿಮೆಯನ್ನು ತಯಾರಿಸಲಾಗಿದೆ.

Ad Widget . Ad Widget .

ನಮ್ಮ ಕಾರ್ಖಾನೆಯಲ್ಲಿ 20 ಮಂದಿ ಕುಶಲಕರ್ಮಿಗಳು ಸುಮಾರು ಮೂರು ತಿಂಗಳಲ್ಲಿ ಈ ಪ್ರತಿಮೆ ತಯಾರಿಸಿದ್ದಾರೆ,’ ಎಂದು ರಾಧಿಕಾ ಚೈನ್ಸ್‌ ಮಾಲೀಕ ಬಸಂತ್‌ ಬೊಹ್ರಾ ತಿಳಿಸಿದ್ದಾರೆ. ಮೋದಿ ಅವರ ಚಿನ್ನದ ಪ್ರತಿಮೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Leave a Comment

Your email address will not be published. Required fields are marked *