Ad Widget .

ಶ್ರೀರಾಮ ಮಧ್ಯಾಹ್ನವೇ ಹೆಂಡತಿ ಸೀತೆ ಜೊತೆಗೂಡಿ ಹೆಂಡ ಹೀರುತ್ತಿದ್ದ| ಮತ್ತೆ ರಾಮನಿಂದನೆ ಮಾಡಿ‌ ನಾಲಿಗೆ ಹರಿಬಿಟ್ಟ ಕೆ.ಎಸ್.ಭಗವಾನ್

ಸಮಗ್ರ ನ್ಯೂಸ್: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಿಂತಕ ಕೆ.ಎಸ್. ಭಗವಾನ್ ಇದೀಗ ಮರ್ಯಾದ ಪುರುಷೋತ್ತಮ ಶ್ರೀರಾಮನ ಕುರಿತು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಮಧ್ಯಾಹ್ನ ಆದರೆ ಸಾಕು ಸೀತೆ ಜೊತೆ ಹೆಂಡ ಕುಡಿದುಕೊಂಡು ಕುಳಿತಿರುತ್ತಿದ್ದ ರಾಮ ಆಕೆಗೂ ಕುಡಿಸುತ್ತಿದ್ದ ಎಂದು ಹೇಳಿದ್ದಾರೆ.

Ad Widget . Ad Widget .

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇದೆ ಎಂದು ತಿಳಿಸಿದ್ದಾರೆ.

Ad Widget . Ad Widget .

ರಾಮರಾಜ್ಯಕ್ಕೆ ಯಾವುದೇ ಅರ್ಥವಿಲ್ಲ. ಮಹಾತ್ಮ ಗಾಂಧೀಜಿಯವರ ಕಾರಣದಿಂದ ರಾಮರಾಜ್ಯದ ಮಾತು ಹರಡುತ್ತಿದೆ. ಆದರೆ ರಾಮ, ತನ್ನ ಆಡಳಿತದ ಸಮಯದಲ್ಲಿ ಪುರೋಹಿತರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅಲ್ಲದೆ ಲಕ್ಷ್ಮಣನನ್ನು ಆತ ಗಡಿಪಾರು ಮಾಡಿದ್ದ. ಸೀತೆಯನ್ನು ಕಾಡಿಗೆ ಕಳುಹಿಸಿದ್ದ ಎಂದು ಹೇಳಿದ್ದಾರೆ.

ಭಗವಾನ್ ರ ಈ ಹೇಳಿಕೆಗೆ ಹಿಂದೂ‌‌ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ನಂಬಿಕೆ ಮತ್ತು ‌ದೇವರ ಮೇಲೆ ಭಗವಾನ್ ಮಾಡುತ್ತಿರುವ ಅವಹೇಳನಕಾರಿ ಮಾತುಗಳಿಗೆ ಖಂಡನೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *