Ad Widget .

ಚಲಿಸುತ್ತಿದ್ದ ಸ್ಕೂಟಿಯಲ್ಲಿ ಪ್ರೇಮಿಗಳ ಸಕತ್ ರೊಮ್ಯಾನ್ಸ್| ಇವರ ಸರಸಕ್ಕೆ ನೆಟ್ಟಿಗರು ಕೊಟ್ರು ಶಾಕ್!! ಇದು ಸೋಶಿಯಲ್ ಮೀಡಿಯಾ ಎಫೆಕ್ಟ್ ಗುರೂ…!

ಸಮಗ್ರ ನ್ಯೂಸ್: ಪ್ರೇಮಿಗಳಿಬ್ಬರು ಸ್ಕೂಟಿಯಲ್ಲಿ ಕುಳಿತಿ ಸಾರ್ವಜನಿಕವಾಗಿ ಸರಸ ಸಲ್ಲಾಪವಾಡುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹುಡುಗ ಸ್ಕೂಟಿ ಓಡಿಸುವಾಗ ಅವನ ಮಡಿಲಲ್ಲಿ ಕೂತು ಅಪ್ಪಿಕೊಂಡಿದ್ದ ಹುಡುಗಿ ಗಟ್ಟಿಯಾಗಿ ಹಗ್‌ ಮಾಡಿ ಮುತ್ತಿಡುತ್ತಿದ್ದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಜೋಡಿಗೆ ನೆಟ್ಟಿಗರು ಶಾಕ್‌ ನೀಡಿದ್ದಾರೆ.

Ad Widget . Ad Widget .

ಇತ್ತೀಚಿಗೆ ಪ್ರೇಮಿಗಳ ವರ್ತನೆ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವಂತಿವೆ. ಬೈಕ್‌ ಮೇಲೆ ಲವರ್ಸ್‌ ಸರಸ ಸಲ್ಲಾಪವಾಡುವ ಪ್ರಸಂಗಗಳು ಹೆಚ್ಚಾಗುತ್ತಲೇ ಇವೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯ ರಸ್ತೆಯಲ್ಲಿ ಕಂಡುಬಂದ ಈ ದೃಶ್ಯವನ್ನು ಜನರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Ad Widget . Ad Widget .

ವೀಡಿಯೊ ವೈರಲ್ ಆಗಿ ಲಕ್ನೋ ಪೊಲೀಸರಿಗೆ ತಲುಪಿದೆ. ಪೊಲೀಸರು ಸ್ಕೂಟಿಯ ನೋಂದಣಿ ಸಂಖ್ಯೆ ಆಧರಿಸಿ ಸವಾರನನ್ನು ಪತ್ತೆ ಹಚ್ಚಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸ್ಕೂಟಿ ಸವಾರ ವಿಕ್ಕಿ ಶರ್ಮಾ ಎಂಬಾತನನ್ನು ಬಂಧಿಸಿ ಆತನ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಐಪಿಸಿ ಕಲಂ 294 ಮತ್ತು 279 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೈಕ್‌ನಲ್ಲಿ ಆತನೊಂದಿಗೆ ಅನುಚಿತವಾಗಿ ವರ್ತಿಸಿದ ಬಾಲಕಿಯನ್ನು ಅಪ್ರಾಪ್ತೆ ಎಂದು ಗುರುತಿಸಲಾಗಿದೆ.

ಈ ಘಟನೆ ಕುರಿತು ಲಕ್ನೋ ಕೇಂದ್ರ ವಲಯದ ಡಿಸಿಪಿ ಅಪರ್ಣಾ ರಜತ್ ಕೌಶಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆದ ಕೂಡಲೇ ತನಿಖೆ ಆರಂಭಿಸಿ ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಯುವಕನನ್ನು ಪತ್ತೆ ಹಚ್ಚಲಾಗಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಸ್ಕೂಟಿ ಮೇಲೆ ಗೆಳತಿಯೊಂದಿಗೆ ಎಂಜಾಯ್ ಮಾಡುತ್ತಿದ್ದ ಪ್ರೇಮಿಗೆ ನೆಟ್ಟಿಗರು ಶಾಕ್‌ ನೀಡಿದ್ದಾರೆ.

Leave a Comment

Your email address will not be published. Required fields are marked *