Ad Widget .

ನಟಿ ರಾಖಿ ಸಾವಂತ್ ಅರೆಸ್ಟ್

ಸಮಗ್ರ ನ್ಯೂಸ್: ನಟಿ ಶೆರ್ಲಿನ್ ಚೋಪ್ರಾ ದಾಖಲಿಸಿದ ಎಫ್‌ಐಆರ್’ಗೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ. ಅಂಬೋಲಿ ಪೊಲೀಸರು ವಶಕ್ಕೆ ಪಡೆದಿದ್ದು, ವರದಿಗಳ ಪ್ರಕಾರ, ರಾಖಿ ತನ್ನ ಪತಿ ಆದಿಲ್ ದುರಾನಿ ಅವರೊಂದಿಗೆ ಪಾಲುದಾರಿಕೆ ಹೊಂದಿರುವ ತನ್ನ ನೃತ್ಯ ಅಕಾಡೆಮಿ ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಬೇಕಿತ್ತು. ಆದರೆ ಅದಕ್ಕೂ ಮೊದಲೇ ರಾಖಿ ಸಾವಂತ್ ಬಂಧನವಾಗಿದೆ.

Ad Widget . Ad Widget .

ರಾಖಿ ಸಾವಂತ್ ಬಂಧನದ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್’ನಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ‘ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವ್ರನ್ನ ಬಂಧಿಸಿದ್ದಾರೆ. ನಿನ್ನೆ, ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ’.

Ad Widget . Ad Widget .

ಕಳೆದ ವರ್ಷ ರಾಖಿ ಸಾವಂತ್ ಮೀಟೋ ಆರೋಪಿ ಸಾಜಿದ್ ಖಾನ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29 ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆ ದಾಖಲಿಸಿದ ನಂತ್ರ ಶೆರ್ಲಿನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಲ್ಮಾನ್ ಖಾನ್ ಚಲನಚಿತ್ರ ನಿರ್ಮಾಪಕರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದಾಗ್ಯೂ, ರಾಖಿ ಸಾವಂತ್ ಅವರು ಸಾಜಿದ್ ಸಮರ್ಥಿಸಿಕೊಂಡರು ಮತ್ತು ಶೆರ್ಲಿನ್ ಅವರ ಹೇಳಿಕೆಯನ್ನ ಖಂಡಿಸಿದರು.

ಈ ಬಗ್ಗೆ ಮಾತನಾಡಿದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂದು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದರು. ನಂತರ ಶೆರ್ಲಿನ್ ಮಾನಹಾನಿ ಆರೋಪದ ಮೇಲೆ ರಾಖಿ ವಿರುದ್ಧ ದೂರು ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *