Ad Widget .

ಬಿ.ಸಿ. ರೋಡಿನಲ್ಲಿ ಸ್ಯಾಂಟ್ರೋ ರವಿಯ ಕಾರು..?|ಸಾರ್ವಜನಿಕ ವಲಯದಲ್ಲಿ ಮೂಡಿದ ಸಂಶ

ಸಮಗ್ರ ನ್ಯೂಸ್: ಬಿ.ಸಿ. ರೋಡಿನಲ್ಲಿ ಕಳೆದ ಕೆಲವು ದಿನಗಳಿಂದ ಟೊಯೋಟಾ ಇನೋವಾ ಕಾರೊಂದು ಅನಾಥವಾಗಿ ನಿಂತು ಕೊಂಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಗಳು ಮೂಡಿದೆ.

Ad Widget . Ad Widget .

ಬಿಸಿರೋಡಿನ ಭಾರತ್ ಸ್ಟೋರ್ ಮುಂಭಾಗದಲ್ಲಿ ಪ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದ್ದು , ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚಿಗೆ ಭಾರೀ ಸುದ್ಧಿಯಾಗಿದ್ದ, ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ.

Ad Widget . Ad Widget .

ಅಸಲಿಗೆ ಇದು ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ಈ ಕಾರಿನ ದಾಖಲೆ ತೋರಿಸುತ್ತಿದೆ. ಕೆ.ಎಲ್.14 ವೈ.8999 ನಂ.ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿದೆ. ಇಲಾಖೆ ಕೆಲವೊಂದು ಕಾರಣಗಳನ್ನು ನೀಡಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ ದಾಖಲೆ ತೋರಿಸುತ್ತಿದೆ.

ನಿಲ್ಲಿಸಲಾಗಿದ್ದ ಕಾರಿನ ಒಳ ಭಾಗದಲ್ಲಿ ಚೀಟಿ ಒಂದನ್ನು ಇಟ್ಟಿದ್ದು, ಸಮೀರ್ ಎಂಬ ಹೆಸರಿನ ಮುಂದೆ 9995333448 ಎಂದು ಬರೆಯಲಾಗಿದೆ. ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆದಿದ್ದಾರೆ. ಸ್ಥಳೀಯ ಅಂಗಡಿ ಮಾಲಕರಿಗೆ ಈ ಕಾರಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿದ್ದು, ಸ್ಯಾಂಟ್ರೋ ರವಿ ಇಲ್ಲಿ ಕಾರು ಇಟ್ಟು ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

Leave a Comment

Your email address will not be published. Required fields are marked *