ಮದುವೆ ಮನೆಯಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

ಸಮಗ್ರ ನ್ಯೂಸ್: ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ 32 ವರ್ಷದ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

Ad Widget ... ..

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನಿವಾಸಿ ಅಭಯ್ ಸಚಿನ್ ಎಂಬಾತನ ಮದುವೆಗೆ ರೇವಾಗೆ ಬಂದಿದ್ದರು. ಮದುವೆಯ ವೀಡಿಯೋದಲ್ಲಿ, ಮದುವೆ ಸಂಭ್ರಮದಲ್ಲಿ ಡ್ರಮ್ ಸದ್ದು ಜೋರಾಗಿದ್ದು, ಕೆಲವರು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ.

Ad Widget

ಈ ವೇಳೆ, ಅಭಯ್ ಕೂಡ ಅವರೊಂದಿಗೆ ಡಾನ್ಸ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ವಿಡಿಯೋ ತೋರಿಸಿದೆ.ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ‌ಆತ ಆ ವೇಳೆಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *