Ad Widget .

ಜ.27ರಿಂದ ಮಂಗಳೂರಿನಲ್ಲಿ ಫಿಶ್ ಫೆಸ್ಟಿವಲ್

ಸಮಗ್ರ ನ್ಯೂಸ್: ಮೀನುಗಾರಿಕೆ ಕಾಲೇಜು, ಹೈದರಾಬಾದ್‍ನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿ ಇದೇ ಜ. 27 ಹಾಗೂ 28ರಂದು ಬೆಳಿಗ್ಗೆ 10 ರಿಂದ ಸಂಜೆಯ ವರೆಗೆ ಫಿಶ್ ಫೆಸ್ಟಿವಲ್-2023 ಹಮ್ಮಿಕೊಳ್ಳಲಾಗಿದೆ.

Ad Widget . Ad Widget .

ಕಾರ್ಯಕ್ರಮವನ್ನು ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಜ.27ರ ಸಂಜೆ 5 ಗಂಟೆಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಉದ್ಘಾಟಿಸುವರು. ಬೀದರ್ ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ.ಸಿ. ವೀರಣ್ಣ, ಹೈದರಾಬಾದ್‍ನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುವರ್ಣ, ಬೀದರ್‍ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎನ್.ಎ. ಪಾಟೀಲ್, ಕರ್ನಾಟಕ ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಶಿವಕುಮಾರ್ ಮಗದ ಅಧ್ಯಕ್ಷತೆ ವಹಿಸುವರು.

Ad Widget . Ad Widget .

Leave a Comment

Your email address will not be published. Required fields are marked *