ವ್ಯಕ್ತಿಯೋರ್ವನ ಪ್ರಾಣ ಉಳಿಸಿದ ನಟ ಸೋನು ಸೂದ್

ಸಮಗ್ರ ನ್ಯೂಸ್: ವಿಮಾನ ನಿಲ್ದಾಣದಲ್ಲಿ ನಟ ಸೋನು ಸೂದ್ ವ್ಯಕ್ತಿಯೋರ್ವನ ಪ್ರಾಣ ಉಳಿಸಿ ರಿಯಲ್ ಹೀರೋ ಆಗಿದ್ದಾರೆ. ಕೊರೊನಾ ಕರಾಳ ಸಮಯದಲ್ಲಿ ಸೋನು ಸೂದ್ ಅನೇಕ ಜನರಿಗೆ ಸಹಾಯ ಮಾಡಿದ್ದರು. ಆ ಟ್ರೆಂಡ್ ಈಗಲೂ ಮುಂದುವರಿದಿದೆ.ಇದೀಗ ಸೋನು ಸೂದ್ ಒಬ್ಬ ವ್ಯಕ್ತಿಯ ಜೀವ ಉಳಿಸಿದ್ದು, ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಆಗಿದ್ದಾರೆ.

Ad Widget ... ..

ಮಾಧ್ಯಮಗಳ ವರದಿ ಪ್ರಕಾರ, ಸೋನು ಸೂದ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ವಾಸ್ತವವಾಗಿ ಸೋನು ಸೂದ್ ದುಬೈನಿಂದ ಹಿಂದಿರುಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಮೂರ್ಛೆ ಹೋದನು. ಆ ವ್ಯಕ್ತಿ ಪ್ರಜ್ಞಾಹೀನನಾಗಿ ಬಿದ್ದ ತಕ್ಷಣ, ಸುತ್ತಲೂ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೇ ಸೋನು ಸೂದ್ ಹತ್ತಿರದ ಇಮಿಗ್ರೇಷನ್ ಕೌಂಟರ್‌ನಲ್ಲಿ ನಿಂತಿದ್ದರು.

Ad Widget

ಶಬ್ದ ಕೇಳಿದ ತಕ್ಷಣ ಸೋನು ಸೂದ್ ಅಲ್ಲಿಗೆ ಬಂದಿದ್ದಾರೆ. ಮೊದಲು ಆ ವ್ಯಕ್ತಿಗೆ ಸಿಪಿಆರ್ ಕೊಡಲು ಆರಂಭಿಸಿದ್ದಾರೆ. ಸ್ವಲ್ಪ ಸಮಯದವರೆಗೆ ಸಿಪಿಆರ್ ನೀಡಿದ ನಂತರ, ವ್ಯಕ್ತಿಗೆ ಪ್ರಜ್ಞೆ ಮರಳಿದೆ. ಸೋನು ಸೂದ್ ಅವರ ಈ ಸಾಹಸ ನೋಡಿ ಎಲ್ಲರ ಮುಖದಲ್ಲೂ ನಗು ಮೂಡಿತ್ತು. ವ್ಯಕ್ತಿ ಸೋನು ಸೂದ್ ಅವರಿಗೆ ಧನ್ಯವಾದ ಹೇಳಿದ್ದಾರೆ.

Leave a Comment

Your email address will not be published. Required fields are marked *