Ad Widget .

ಮತ್ತೊಬ್ಬ ಯುವನಟನ ಕಳೆದುಕೊಂಡ ಕನ್ನಡ ಚಿತ್ರರಂಗ| ಶೂಟಿಂಗ್ ವೇಳೆ ಅನಾರೋಗ್ಯದಿಂದ ನಟ ಧನುಷ್ ಸಾವು

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್​ಗೆ ಬರಸಿಡಿಲಿನಂತೆ ಮತ್ತೊಂದು ಸುದ್ದಿ ಬಂದೆರಗಿದೆ. ಯುವ ನಟ ಧನುಷ್ ಆಘಾತಕಾರಿ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ಇವರು ಅಲ್ಲಿನ ಹವಾಮಾನದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ದುರದೃಷ್ಟವಶಾತ್​ ಧನುಷ್​ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Ad Widget . Ad Widget .

ಪ್ಯಾರ್ ಕಾ ಗೋಲ್ ಗುಂಬಜ್, ಕೊಟ್ಲಲ್ಲಪ್ಪೋ ಕೈ, ಸಂಪಿಗೆ ಹಳ್ಳಿ, ಲೀಡರ್, ಸ್ನೇಹಿತ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ನಟ ಧನುಷ್ ಅಭಿನಯಿಸಿದ್ದಾರೆ. ಕಳೆದ ವಾದ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ವೇಳೆ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ನ್ಯೂಮೋನಿಯಾದಿಂದ ಅವರು ಬಳಲುತ್ತಿದ್ದರು. ಲಡಾಕ್ ವಾತಾವರಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಿನ್ನೆ ರಾತ್ರಿ 10:45ಕ್ಕೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

ಧನುಷ್​ ಅವರು ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರು. ಇವರ ಮೂಲ ಹೆಸರು ಮುತ್ತುರಾಜ್. ಆದರೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಮೇಲೆ ಅವರು ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ನಂತರ ಅವರು ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಪ್ಯಾರ್ ಕಾ ಗೋಲ್​ಗುಂಬಜ್​, ಸ್ನೇಹಿತ.. ಹೀಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಕೆಲವು ಚಿತ್ರಗಳಲ್ಲಿ ಸೈಡ್​ ಆಯಕ್ಟರ್​ ಆಗಿ ಕೆಲಸ ನಿರ್ವಹಿಸಿದ್ದಾರೆ.

Leave a Comment

Your email address will not be published. Required fields are marked *