Ad Widget .

ಕದ್ರಿ ಮಂಜುನಾಥನ ಸನ್ನಿದಿ ಎದುರು‌ ಅನ್ಯಧರ್ಮೀಯರಿಗೆ ವ್ಯಾಪಾರ ನಿಷಿದ್ಧ| ಮೂರ್ತಿ ಪೂಜೆ ಹರಾಮ್ ಎನ್ನೋರು ವ್ಯಾಪಾರ ಮಾಡದಂತೆ ಬ್ಯಾನರ್ ಹಾಕಿದ ಸಂಘ ಪರಿವಾರ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಹಿಂದೂ ದೇವಸ್ಥಾನಗಳ ವಿಶೇಷ ಕಾರ್ಯಕ್ರಮಗಳು, ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹೇರುವ ಬ್ಯಾನರ್​ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಈ ಬಾರಿ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ವ್ಯಾಪಾರ ನಿಷೇಧದ ಬ್ಯಾನರ್ ಕಾಣಿಸಿಕೊಂಡಿದೆ.

Ad Widget . Ad Widget .

ವಿಶ್ವ ಹಿಂದೂ ಪರಿಷತ್, ಬಜರಂಗದಳ ಶಿವಶಕ್ತಿ ಶಾಖೆ ಕದ್ರಿಯಿಂದ ಬ್ಯಾನರ್ ಅಳವಡಿಸಲಾಗಿದೆ. ಇದೇ ಬ್ಯಾನರ್​ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಆರೋಪಿಯ ಉಲ್ಲೇಖವೂ ಇರುವುದು ಹಲವರ ಗಮನ ಸೆಳೆದಿದೆ.

Ad Widget . Ad Widget .

‘ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ’ ಎಂದು ಬ್ಯಾನರ್ ನಲ್ಲಿ ಹೇಳಲಾಗಿದೆ. ‘ಕುಕ್ಕರ್ ಬಾಂಬ್ ಆರೋಪಿಯು ಮೊದಲು ಕದ್ರಿ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿದ್ದ. ಅಂಥ ಮನಸ್ಥಿತಿ ಇರುವವರಿಗೆ ಮತ್ತು ವಿಗ್ರಹಾರಾಧನೆಯನ್ನು ಹರಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.

ಕದ್ರಿ ಜಾತ್ರಾ ಮಹೋತ್ಸವವು ಜನವರಿ 14 ರಿಂದ ಜನವರಿ 23ರವರೆಗೆ ನಡೆಯಲಿದೆ. ಒಂಬತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *