ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಯುವಕ ದಾರುಣ ಸಾವು

ಸಮಗ್ರ ನ್ಯೂಸ್: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಣಂಬೂರಿನ ಐಎಂಸಿಯ ನಾಲ್ಕನೇ ಟರ್ಮಿನಲ್ ಉದ್ಯೋಗಿಯಾಗಿರುವ ಸುಜಿತ್‌ ರಾಜ್‌ (28) ಮಂಗಳವಾರ ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Ad Widget ... ..

ಮಾರಿಪಳ್ಳ ನಿವಾಸಿ ಸುಜಿತ್ ಅವರು ಜ.16ರಂದು ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಪಣಂಬೂರಿನಿಂದ ಮನೆ ಕಡೆಗೆ ಹಿಂತಿರುಗುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯ ವಳಚ್ಚಿಲ್ ಸಮೀಪ ಇವರಿದ್ದ ಪಲ್ಸರ್‌ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟ ಸುಜಿತ್ ರಾಜ್ ತಲೆ ಡಿವೈಡರ್‌ಗೆ ಬಡಿದಿದೆ. ತಕ್ಷಣ ಸ್ಥಳೀಯರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

Ad Widget

ಅಲ್ಲಿ ಮಂಗಳವಾರ ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ತಾಯಿ, ಮೂವರು ಸಹೋದರರನ್ನು ಅಗಲಿದ್ದಾರೆ. ಕಂಕನಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *