ಸಮಗ್ರ ನ್ಯೂಸ್: ಭೀಕರವಾಗಿ ಯುವತಿಯನ್ನು ಹತ್ಯೆ ಮಾಡಿ ನಾಪತ್ತೆಯಾಗಿದ್ದ ಆರೋಪಿ ಎರಡು ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ನಾಂಗಾಲ ಗ್ರಾಮದಲ್ಲಿ ಹತ್ಯೆ ಪ್ರಕರಣ ನಡೆದಿತ್ತು. ಗ್ರಾಮದ ಆರತಿ ಎಂಬಾಕೆಯನ್ನು ತಿಮ್ಮಯ್ಯ ಎಂಬಾತ ಹತ್ಯೆ ಮಾಡಿ ನಾಪತ್ತೆಯಾಗಿದ್ದ.

ವಿರಾಜಪೇಟೆ ತಾಲ್ಲೂಕಿನ ಕಂಡಂಗಾಲ ಗ್ರಾಮದ ಆರೋಪಿ ಮನೆಯ ಸಮೀಪದ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿತ್ತು. ಕೆರೆಯ ನೀರನ್ನು ಖಾಲಿ ಮಾಡಿಸಿ ಹುಡುಕಾಟ ನಡೆಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಎರಡು ದಿನಗಳ ಬಳಿಕ ಕಡೆಗೂ ಕೆರೆಯಲ್ಲಿ ತಿಮ್ಮಯ್ಯ ಶವ ಪತ್ತೆಯಾಗಿದೆ.
ಇದರೊಂದಿಗೆ ಯುವತಿಯ ಹತ್ಯೆ ಪ್ರಕರಣ ಯುವಕನ ಆತ್ಮಹತ್ಯೆ ಮೂಲಕ ಅಂತ್ಯವಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.