Ad Widget .

ಸಿದ್ದರಾಮಯ್ಯ ಗುರಾಯಿಸಿ ನೋಡಿದ ನಿರೂಪಕಿ ಯಾರು ಗೊತ್ತಾ? ವೈರಲ್ ವಿಡಿಯೋ ಬಗ್ಗೆ ಆಕೆ ಹೇಳಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್…

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದೆ. ಫೇಸ್​ಬುಕ್​ ಸ್ಟೋರಿ, ವಾಟ್ಸಾಪ್​ ಸ್ಟೇಟಸ್ ಹಾಗೂ ಇನ್​ಸ್ಟಾಗ್ರಾಂ ಸ್ಟೋರಿ ಎಲ್ಲಿ ನೋಡಿದರು ಸಿದ್ದರಾಮಯ್ಯ ಅವರ ವಿಡಿಯೋ ವೈರಲ್​ ಆಗಿದೆ.

Ad Widget . Ad Widget .

ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್​ ಮಹಿಳಾ ಸಮಾವೇಶದಲ್ಲಿ ವೇದಿಕೆ ಮೇಲಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರೂಪಕಿಯನ್ನು ವಾರೆಗಣ್ಣಿಂದ ನೋಡಿದರು. ಹಾಗೇ ನಿರೂಪಕಿಯನ್ನು ನೋಡಿಕೊಂಡೇ ವೇದಿಕೆಯಿಂದ ಹೊರ ನಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಮೆನ್​ ವಿಲ್​ ಬಿ ಮೆನ್​ ಎಂದು ಟ್ರೋಲ್​ ಆಗಿದೆ.

Ad Widget . Ad Widget .

ಇದೀಗ ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಅಥವಾ ಕಾಂಗ್ರೆಸ್ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್ ವಿಡಿಯೋ ಕುರಿತು ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ವೇದಿಕೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ತುಂಬಾ ಜನ ಸುತ್ತುವರಿದಿದ್ದರೂ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ನನ್ನನ್ನು ನೋಡಿದರು. ನೋಡಿದ ಬಳಿಕ ಇವಳೇನಾ ಅಂತಾ ಅಲ್ಲಿಂದ ಹೊರಟರು ಎಂದು ಲಾವಣ್ಯ ಬಲ್ಲಾಳ್ ಅವರು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಸರ್​ ಅವರಿಗೆ ನಾನು ತುಂಬಾ ಪರಿಚಯ. ಕಾಂಗ್ರೆಸ್​ನಲ್ಲಿ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅವರು ನನ್ನನ್ನು ನೋಡಿದ್ದಾರೆ. ನೀವು ಆ ವಿಡಿಯೋ ನೋಡಿರಬಹುದು. ಇವಳೇನಾ ಎಂದು ಹೇಳಿಕೊಂಡು ಹೋಗುತ್ತಾರೆ. ಕುತೂಹಲಕ್ಕೆ ಯಾರು ಅಂತಾ ನೋಡಿದರಷ್ಟೇ, ಅದನ್ನೇ ಕೆಲವರು ಟ್ರೋಲ್​ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಸಾಹೇಬರು ನಮಗೆಲ್ಲ ಸ್ಫೂರ್ತಿ. ಕಾರ್ಯಕ್ರಮ ಹಿಂದಿನ ದಿನ ಸಂಜೆಯು ಅವರ ಮನೆಗೆ ಕೆಲವು ಮಾರ್ಗದರ್ಶನ ಪಡೆಯಲು ಹೋಗಿದ್ದೆ. ಸಿದ್ದರಾಮಯ್ಯ ಸಾಹೇಬರಿಗೆ ನಾನು ಚೆನ್ನಾಗಿ ಪರಿಚಯವಿದ್ದೇನೆ. ಪಕ್ಷದ ವಕ್ತಾರೆ ಎಂಬುದು ಸಹ ಅವರಿಗೆ ಗೊತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಕೆಲಸ ಮಾಡುತ್ತಿದ್ದೇನೆ ಎಂಬ ವಿಚಾರ ಗೊತ್ತಿದೆ ಎಂದರು.

Leave a Comment

Your email address will not be published. Required fields are marked *