Ad Widget .

ನಟನೆ ಬಿಟ್ಟು ಮಾಂಸದಂಧೆಗಿಳಿದ ಸ್ಯಾಂಡಲ್ ವುಡ್ ನಟ ಅರೆಸ್ಟ್| ಹೆಣ್ಮಕ್ಕಳನ್ನು ಬಳಸಿ ಹಣ ಸುಲಿಗೆ ಮಾಡ್ತಿದ್ದ ಆರೋಪಿ

ಸಮಗ್ರ ನ್ಯೂಸ್: ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್​ವುಡ್ ನಟ ಈಗ ಅರೆಸ್ಟ್ ಆಗಿದ್ದಾರೆ. ಲೊಕ್ಯಾಂಟೋ ಆಯಪ್ ನ ಹಿಂದೆ ಬಿದ್ದಂತಹ ನಟ ಈಗ ಕಂಬಿ ಎಣಿಸುತ್ತಿದ್ದಾನೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಸಂಜು ಅಲಿಯಾಸ್ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.ಹೆಣ್ಣುಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ ಪ್ರಮುಖ ಆರೋಪಿ ಸಂಜು ನಟನೆ ಬಿಟ್ಟು ಹೆಣ್ಣುಮಕ್ಕಳ ಫೋಟೊ ಬಳಸಿ ಹಣ ಪೀಕುವ ದಂಧೆಗಿಳಿದಿದ್ದಾಗಿ ಆರೋಪವಿದೆ.

Ad Widget . Ad Widget .

2019ರಲ್ಲಿ ಬಿಡುಗಡೆಯಾಗಿದ್ದ ನ್ಯೂರಾನ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ರೀಲ್ ಕಥೆಯ ನಾಯಕನೇ ರಿಯಲ್ ಘಟನೆಯ ಪ್ರಮುಖ ಆರೋಪಿಯಾಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಸೈಕೋಲಾಜಿ ಸಂಬಂಧಪಟ್ಟಂತಹ ಚಿತ್ರದಲ್ಲಿ ನಟಿಸಿದ್ದ ನಾಯಕ ನಟ ಮಂಜುನಾಥ್ ನ್ಯೂರಾನ್ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ನ್ಯೂರಾನ್ ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿದ್ದ ಮಂಜುನಾಥ್ ಯುವ ಎಂಬ ಹೆಸರಿನಲ್ಲಿ ಪರಿಚಿತರಾಗಿದ್ದರು.

ಈ ಪ್ರಕರಣದಲ್ಲಿ ಮಂಜುನಾಥ್ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *